17.5 C
Bengaluru
Monday, January 20, 2020

2 ದಿನಗಳಲ್ಲಿ ಕರಗಿತು 3.39 ಲಕ್ಷ ಕೋಟಿ ರೂ.

Latest News

ಮಾಸಾಂತ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ; ಸಚಿವಾಕಾಂಕ್ಷಿಗಳಿಂದ ದೆಹಲಿಯಲ್ಲಿ ಅಂತಿಮ ಹಂತದ ಲಾಬಿ

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸ್ತಿರೋ ಸಚಿವಾಕಾಂಕ್ಷಿಗಳ ಅಂತಿಮ ಹಂತದ ಕಸರತ್ತು ಬೆಂಗಳೂರಿನಿಂದ ಈಗ ದೆಹಲಿಗೆ ಶಿಫ್ಟ್​ ಆಗಿದೆ. ದಾವೋಸ್​ಗೆ ಸಿಎಂ ಬಿಎಸ್ ಯಡಿಯೂರಪ್ಪ ತೆರಳಿದ್ದಾರೆ. ಬಿಎಸ್​ವೈ...

ಚೆನ್ನೈನಲ್ಲಿ ಎಂಎಸ್ ಧೋನಿ ರಿಟೇನ್!

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್​ಗೂ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡದಲ್ಲಿ...

ಯೋಗಕ್ಷೇಮ| ಯೋಗಾಸನಗಳನ್ನು ಯಾರು ಅಭ್ಯಾಸ ಮಾಡಬಹುದು?

ಹೌದು, ಈ ಪ್ರಶ್ನೆ ಸಹಜವೇ. ಯೋಗ ಬರಿ ಋಷಿ ಮುನಿಗಳಿಗೆ, ನಿವೃತ್ತರಿಗೆ, ಸಾಧಕರಿಗೆ ಕಡೆಗೆ ರೋಗಿಗಳಿಗೆ ಎಂಬ ಕಲ್ಪನೆ ಹಬ್ಬಿ ಬಿಟ್ಟಿದೆ. ಯೋಗ...

ಪರೀಕ್ಷಾ ಪೆ ಚರ್ಚಾ 3ನೇ ಆವೃತ್ತಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಜತೆ ಸಂವಹನ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂರನೇ ಆವೃತ್ತಿ ಕಾರ್ಯಕ್ರಮ ದೆಹಲಿಯ ತಲ್ಕತೋರಾ...

ರಾಜ್ಯದ 5 ನಗರಕ್ಕೆ ವಿಮಾನ ಸೇವೆ

ಬೆಂಗಳೂರು: ದೇಶದ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನಪಡೆಯುವತ್ತ ರಾಜ್ಯ ಮುನ್ನುಗುತ್ತಿದ್ದು, ಕಲಬುರಗಿ ನಂತರ ಇದೀಗ ರಾಜ್ಯದ ಐದು ನಗರಗಳಲ್ಲಿ ಮುಂದಿನ 2...

ನವದೆಹಲಿ: ಕೇಂದ್ರ ಬಜೆಟ್​ನಿಂದ ಷೇರು ಮಾರುಕಟ್ಟೆಗೆ ನಿರಾಸೆಯಾಗಿದ್ದು, ಎರಡು ದಿನಗಳಲ್ಲಿ ಹೂಡಿಕೆದಾರರ ಸುಮಾರು -ಠಿ; 3.39 ಲಕ್ಷ ಕೋಟಿ ಸಂಪತ್ತು ಕರಗಿದೆ. ಬಾಂಬೆ ಷೇರುಪೇಟೆಯಲ್ಲಿ (ಬಿಎಸ್​ಇ) ಶುಕ್ರವಾರವಾದ ವಹಿವಾಟಿನ ಅಂತ್ಯಕ್ಕೆ -ಠಿ; 153.58 ಲಕ್ಷ ಕೋಟಿ ನಷ್ಟವಾದರೆ, ಸೋಮವಾರ -ಠಿ; 147.43 ಕೋಟಿ ಸಂಪತ್ತು ಕರಗಿದೆ. ಇದು 2019ರಲ್ಲಿ ಸಂಪತ್ತು ನಷ್ಟವಾದ ಗರಿಷ್ಠ ದಾಖಲೆ ಕೂಡ ಆಗಿದೆ.

ಬಿಎಸ್​ಇ ಸೂಚ್ಯಂಕ ಸೋಮವಾರ 792.82 ಅಂಕ ದಾಖಲೆಯ (ಶೇ. 2.01) ಇಳಿಕೆ ಕಂಡು, 38,720.57ಕ್ಕೆ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರು ಮಾರುಕಟ್ಟೆ (ನಿಫ್ಟಿ) 247.15 ಅಂಶ (ಶೇ. 2.09) ಕುಸಿದು, 11,564ಕ್ಕೆ ಸ್ಥಿರವಾಯಿತು.

ಎಚ್​ಡಿಎಫ್​ಸಿ ಬ್ಯಾಂಕ್, ಎಲ್ ಆಂಡ್ ಟಿ, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಬಜಾಜ್ ಫೈನಾನ್ಸ್, ಕೋಟಾಕ್ ಮಹಿಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಒಎನ್​ಜಿಸಿ, ಎನ್​ಟಿಪಿಸಿ, ಹಿರೋ ಮೋಟಾರ್​ಕಾರ್ಪ್, ಮಾರುತಿ ಸುಜುಕಿ ಕಂಪನಿಗಳು ಸೋಮವಾರ ಮಧ್ಯಾಹ್ಯದ ಹೊತ್ತಿಗೆ ಶೇ. 8 ಇಳಿಕೆ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ ಯೆಸ್ ಬ್ಯಾಂಕ್, ಡಾ. ಪಾಲ್​ಪಥ್ ಲ್ಯಾಬ್ಸ್, ಪಿಸಿ ಜ್ಯುವೆಲರ್ಸ್, ಎಚ್​ಸಿಎಲ್ ಟೆಕ್ನಾಲಜೀಸ್, ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಗಳ ಷೇರುಗಳ ಮೌಲ್ಯ ತುಸು ವೃದ್ಧಿಸಿತು.

ಅತಿ ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಿರುವುದರಿಂದ ವಿದೇಶಿ ವಲಯದ ಹೂಡಿಕೆ (ಎಫ್​ಪಿಐ) ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಲ್ಲಣಕ್ಕೆ ಐದು ಕಾರಣ…

  • ಬಜೆಟ್​ನಲ್ಲಿ ಪ್ರಸ್ತಾಪಿಸಿರುವ ನೋಂದಾಯಿತ ಕಂಪನಿಗಳಲ್ಲಿ ಸಾರ್ವಜನಿಕ ಕನಿಷ್ಠ ಹೂಡಿಕೆ ಶೇ. 25ರಿಂದ ಶೇ. 35ಕ್ಕೆ ಹೆಚ್ಚಳ.
  • ಅಮೆರಿಕದಲ್ಲಿ ಉದ್ಯೋಗಾವಕಾಶ ಹೆಚ್ಚಿದ್ದು, ಕಳೆದ ತಿಂಗಳು 2.24 ಲಕ್ಷ ಮಂದಿಗೆ ಉದ್ಯೋಗ ಪ್ರಾಪ್ತವಾಗಿದೆ. ಇದರಿಂದ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಇಳಿಸಿದೆ.
  • ಏಷ್ಯಾದ ಇತರ ಷೇರು ಮಾರುಕಟ್ಟೆಗಳಲ್ಲೂ ಇಳಿಕೆ ಕಂಡುಬಂದಿದ್ದು, ಇದು ಭಾರತದ ಮೇಲೂ ಪ್ರಭಾವ ಬೀರಿದೆ.
  • ಅಮೆರಿಕ ಪಶ್ಚಿಮ ಏಷ್ಯಾ ರಾಷ್ಟ್ರಗಳ ಜತೆ ಹೊಂದಿರುವ ವೈಮನಸ್ಯದಿಂದ ಕಚ್ಚಾ ತೈಲ ದರ ಹೆಚ್ಚಳ, ತತ್ಪರಿಣಾಮ ರೂಪಾಯಿ ಮೌಲ್ಯ ಕುಸಿತ. ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಕುಸಿತ ಕಂಡಿದೆ.
  • ಜೂನ್ ತ್ರೖೆಮಾಸಿಕದಲ್ಲಿ ಐಟಿ ಕಂಪನಿಗಳ ಗಳಿಕೆಯಲ್ಲಿ ಆಗಿರುವ ಹಿನ್ನಡೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...