More

    ಬ್ಯಾಂಕಿಂಗ್ ಷೇರುಗಳಿಂದಾಗಿ ಕುಸಿತ ಅನುಭವಿಸಿದ ಸೆನ್ಸೆಕ್ಸ್​, ನಿಫ್ಟಿ

    ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್​ (ಬಿಎಸ್​ಇ) ಮತ್ತು ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್ ಸೂಚ್ಯಂಕ್​ಗಳು ದಿನದ ವಹಿವಾಟಿನ ವೇಳೆ ಏರಿಳಿತ ದಾಖಲಿಸಿದ್ದು, ಬ್ಯಾಂಕಿಂಗ್ ಷೇರುಗಳಿಂದಾಗಿ ಕುಸಿತದೊಂದಿಗೆ ವಹಿವಾಟು ಕೊನೆಗೊಳಿಸಿವೆ.

    ನಾಲ್ಕು ದಿನಗಳಿಂದ ಏರಿಕೆ ದಾಖಲಿಸಿದ್ದ ಷೇರುಪೇಟೆಯಲ್ಲಿ ಬುಧವಾರ ಬ್ಯಾಂಕಿಂಗ್ ಷೇರುಗಳ ಮಾರಾಟ ಹೆಚ್ಚಾಗಿತ್ತು. ಹೀಗಾಗಿ ಇಳಿಕೆ ದಾಖಲಾಗಿದೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್​ 79.90 ಅಂಶ ಕುಸಿತದೊಂದಿಗೆ 41,872.73ರಲ್ಲಿ, ನಿಫ್ಟಿ 19 ಅಂಶಗಳ ಇಳಿಕೆಯೊಂದಿಗೆ 12,343.30 ಯಲ್ಲಿ ವಹಿವಾಟು ಮುಗಿಸಿದೆ.

    ಇಂಡಸ್​ ಇಂಡ್ ಬ್ಯಾಂಕ್ ಷೇರುಗಳು ಶೇಕಡ 5.44 ಇಳಿಕೆ ದಾಖಲಿಸಿದ್ದು, ಇನ್​ಫೋಸಿಸ್​, ಎಸ್​ಬಿಐ, ಪವರ್​ಗ್ರಿಡ್​, ಟೆಕ್ ಮಹೀಂದ್ರಾ, ಭಾರ್ತಿ ಏರ್​ಟೆಲ್​, ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳು ಕೂಡ ಶೇಕಡ 1.21 ರಷ್ಟು ಇಳಿಕೆ ದಾಖಲಿಸಿವೆ.

    ಇನ್ನೊಂದೆಡೆ, ಹೀರೋ ಮೋಟೋಕಾರ್ಪ್​, ಟೈಟಾನ್, ಮಾರುತಿ, ಏಷ್ಯನ್ ಪೇಂಟ್ಸ್​, ಎಂಆ್ಯಂಡ್​ಎಂ, ಟಿಸಿಎಸ್​, ಬಜಾಜ್ ಆಟೋ, ಅಲ್ಟ್ರಾಟೆಕ್​ ಸಿಮೆಂಟ್​ ಷೇರುಗಳು ಶೇಕಡ 2.58ರ ತನಕ ಏರಿಕೆ ದಾಖಲಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts