More

    ಸೆನ್ಸೆಕ್ಸ್​, ನಿಫ್ಟಿ ದಾಖಲೆ ಏರಿಕೆ: ಇನ್ಫೋಸಿಸ್​ ಷೇರು ಶೇಕಡ 4 ಏರಿಕೆಯೊಂದಿಗೆ ವಹಿವಾಟು ಆರಂಭ

    ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಸೋಮವಾರ ಬೆಳಗ್ಗೆ ದಾಖಲೆ ಏರಿಕೆಯೊಂದಿಗೆ ವಹಿವಾಟು ಆರಂಭಿಸಿವೆ.

    ಬೆಳಗ್ಗೆ ಆರಂಭದ ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್​ 293.69 ಅಂಶ ಏರಿಕೆ ದಾಖಲಿಸಿ 41,893.41 ಅಂಶ ತಲುಪಿತ್ತು. ಬಳಿಕ 248.57 ಅಂಶಗಳ ಏರಿಕೆಯೊಂದಿಗೆ 41,848.29ರಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ವೇಳೆ, ನಿಫ್ಟಿ 12,337.75ರಲ್ಲಿ ವಹಿವಾಟು ಶುರುಮಾಡಿತ್ತು. ಬಳಿಕ 70.35 ಅಂಶ ಏರಿಕೆಯೊಂದಿಗೆ 12,327.15ರಲ್ಲಿ ವಹಿವಾಟು ಮುಂದುವರಿಸಿತ್ತು.

    ಇನ್​ಫೋಸಿಸ್​ ಶೇಕಡ 4ರಷ್ಟು ಏರಿಕೆ ದಾಖಲಿಸಿ ಟಾಪ್ ಗೇನರ್ ಅನಿಸಿಕೊಂಡಿತು. ಶುಕ್ರವಾರವಷ್ಟೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದ ಇನ್ಫಿ, 4,466 ಕೋಟಿ ರೂಪಾಯಿ ನೆಟ್ ಪ್ರಾಫಿಟ್​ ಘೋಷಿಸಿತ್ತು. ಇದರ ಪರಿಣಾಮ ಷೇರಿನ ಮೇಲಾಗಿದೆ.

    ಶುಕ್ರವಾರ ವಹಿವಾಟು ಮುಗಿದಾಗ ಸೆನ್ಸೆಕ್ಸ್​ 41,599.72ರಲ್ಲಿ ಮತ್ತು ನಿಫ್ಟಿ 12,256.80ಯಲ್ಲಿ ವಹಿವಾಟು ಕೊನೆಗೊಳಿಸಿತ್ತು. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts