ಕೇಂದ್ರ ಬಜೆಟ್​ಗೆ ಷೇರುಪೇಟೆಯಲ್ಲಿ ಭಾರಿ ನಿರಾಶೆ, ಬೆಳಗಿನ ವಹಿವಾಟಿನಲ್ಲಿ 600 ಅಂಕ ಕುಸಿದ ಸೆನ್ಸೆಕ್ಸ್​

ಮುಂಬೈ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಚೊಚ್ಚಲ ಬಜೆಟ್​ಗೆ ಮುಂಬೈ ಷೇರುಪೇಟೆಯಲ್ಲಿ ಭಾರಿ ನಿರಾಶೆ ವ್ಯಕ್ತವಾಗಿದೆ. ಇದರ ಪರಿಣಾಮ ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್​ 600 ಅಂಕಗಳ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಕೂಡ 200 ಅಂಕಗಳ ಹತ್ತಿರತ್ತಿರ ಕುಸಿತ ಕಂಡಿದೆ.

ಬೆಳಗ್ಗೆ 11.50ರ ಷೇರುಪೇಟೆ ವಹಿವಾಟಿನ ಅಂಕಿಅಂಶದ ಪ್ರಕಾರ ಒಟ್ಟು 597 ಅಂಕಗಳ ಕುಸಿತ ಕಂಡಿದ್ದ ಸೆನ್ಸೆಕ್ಸ್​ 38,888 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು. ಅಂತೆಯೇ ನಿಫ್ಟಿ 191 ಅಂಕಗಳ ಕುಸಿತ ಕಂಡು 11,621 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ಹಿಂಜರಿತಕ್ಕೆ ಒಳಗಾಗಿರುವ ಮೋಟಾರು ವಾಹನ ಕ್ಷೇತ್ರವನ್ನು ಸಂಕಷ್ಟದಿಂದ ಪಾರು ಮಾಡಲು ಬಜೆಟ್​ನಲ್ಲಿ ಯಾವುದೇ ಘೋಷಣೆ ಮಾಡದೇ ಹೋಗಿರುವುದು ಷೇರುಪೇಟೆಯಲ್ಲಿ ಕರಡಿ ಕುಣಿತಕ್ಕೆ ಕಾರಣ ಎನ್ನಲಾಗಿದೆ. ಈ ವಲಯದ ಷೇರುಗಳ ಮಾರಾಟ ಭರಾಟೆ ಹೆಚ್ಚಾಗಿತ್ತು. (ಏಜೆನ್ಸೀಸ್​)

Leave a Reply

Your email address will not be published. Required fields are marked *