More

    ಯುಎಸ್​-ಇರಾನ್​ ಸಂಘರ್ಷ| 52 ಅಂಶ ಕುಸಿತದೊಂದಿಗೆ ಸೆನ್ಸೆಕ್ಸ್​; 12,000ದ ಗಡಿಯಲ್ಲಿ ವಹಿವಾಟು ಮುಗಿಸಿದ ನಿಫ್ಟಿ

    ಮುಂಬೈ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಷೇರುಪೇಟೆಯ ಮೇಲೂ ಪರಿಣಾಮ ಬೀರಿದೆ. ಪರಿಣಾಮ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ)ನ ಸೂಚ್ಯಂಕ ಸೆನ್ಸೆಕ್ಸ್​ ಬುಧವಾರದ ವಹಿವಾಟನ್ನು 52 ಅಂಶ ಕುಸಿತದೊಂದಿಗೂ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ನಿಫ್ಟಿ50) ಸೂಚ್ಯಂಕ ನಿಫ್ಟಿ 50 27.60 ಅಂಶದ ಕುಸಿತದೊಂದಿಗೆ ಮುಗಿಸಿವೆ.

    ಬೆಳಗ್ಗೆ ವಹಿವಾಟು ಆರಂಭದ ವೇಳೆ ಸೆನ್ಸೆಕ್ಸ್​ 400 ಅಂಶಗಳಷ್ಟು ಕುಸಿತ ಕಂಡಿದ್ದು, ನಂತರ ಇಂಟ್ರಾ ಡೇ ವಹಿವಾಟಿನಲ್ಲಿ ಚೇತರಿಕೆ ದಾಖಲಿಸುತ್ತ ದಿನದ ಅಂತ್ಯಕ್ಕೆ 51.73 ಅಂಶ ಕುಸಿತದೊಂದಿಗೆ 40,817.74ರಲ್ಲಿ ವಹಿವಾಟು ಮುಗಿಸಿದೆ. ಇದೇ ರೀತಿ, ನಿಫ್ಟಿ ಶೇಕಡ 0.23 ಅಂದರೆ 27.60 ಅಂಶ ಕುಸಿತ ದಾಖಲಿಸಿ 12,025.35ರಲ್ಲಿ ವಹಿವಾಟು ಕೊನೆಗೊಳಿಸಿದೆ.

    ಸೆನ್ಸೆಕ್ಸ್ ಸ್ಟಾಕ್​ಗಳಲ್ಲಿ ಎಲ್​ಆ್ಯಂಡ್ ಟಿ ಟಾಪ್ ಲೂಸರ್​ ಆಗಿದ್ದು, ಶೇಕಡ 2.19 ಅಂಶ ಕುಸಿತಕ್ಕೊಳಗಾಗಿದೆ. ಇದಲ್ಲದೆ, ಒಎನ್​ಜಿಸಿ, ಟೈಟಾನ್​, ಸನ್ ಫಾರ್ಮಾ, ಹೀರೋ ಮೋಟೋಕಾರ್ಪ್​, ಇನ್​ಫೋಸಿಸ್​ ಷೇರುಗಳು ಕೂಡ ಕುಸಿತ ಕಂಡಿವೆ. ಇನ್ನೊಂದೆಡೆ, ಭಾರ್ತಿ ಏರ್​ಟೆಲ್​, ಟಿಸಿಎಸ್​, ಅಲ್ಟ್ರಾಟೆಕ್​ ಸಿಮೆಂಠ್​, ಬಜಾಜ್ ಫೈನಾನ್ಸ್​, ಐಸಿಐಸಿಐ ಬ್ಯಾಂಕ್​ಗಳು ಶೇಕಡ 2.74ರ ತನಕ ಏರಿಕೆ ದಾಖಲಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts