ಮುಂಬೈ: ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ ಆರಂಭಿಸಿವೆ. ಸೆನ್ಸೆಕ್ಸ್ 200ಕ್ಕೂ ಹೆಚ್ಚು ಕುಸಿತ ದಾಖಲಿಸಿದರೆ ನಿಫ್ಟಿ 18.90 ಅಂಶ ಕುಸಿತದೊಂದಿಗೆ ವಹಿವಾಟು ಶುರುಮಾಡಿವೆ.
ಜಾಗತಿಕ ವಿದ್ಯಮಾನಗಳ ಕಾರಣಕ್ಕಾಗಿ ಎಚ್ಡಿಎಫ್ಸಿ ಟ್ವಿನ್ಸ್, ಕೊಟಾಕ್ ಬ್ಯಅಂಕ್, ಐಟಿಸಿ ಷೇರುಗಳ ಕುಸಿತ ಕಂಡ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಮೇಲಾಗಿದೆ. ಹೀಗಾಗಿ ಸೆನ್ಸೆಕ್ಸ್ ಮಂಗಳವಾರ ವಹಿವಾಟು ಶುರುವಿಗೆ ಇಂಟ್ರಾ ಡೇ ವಹಿವಾಟಿನಲ್ಲಿ 41,301.63ಕ್ಕೆ ತಲುಪಿತ್ತು. ಇದೇ ರೀತಿ ನಿಫ್ಟಿ 12,205.65ರಲ್ಲಿ ವಹಿವಾಟು ನಡೆಸುತ್ತಿತ್ತು.
ಮಾರುಕಟ್ಟೆ ಸೆಂಟಿಮೆಂಟ್ಗೆ ಏಟು ಕೊಟ್ಟದ್ದು ಐಎಂಎಫ್ ಸೋಮವಾರ ಪ್ರಕಟಿಸಿದ ಭಾರತದ ಇಕನಾಮಿಕ್ ಗ್ರೋತ್ ಎಸ್ಟಿಮೇಟ್ ವರದಿ. ಇದು ಶೇಕಡ 4.8 ಎಂದು ಅಂದಾಜಿಸಿದ ಕಾರಣ ಷೇರುಪೇಟೆ ವಹಿವಾಟು ಕುಸಿತ ಕಂಡಿದೆ. ಸೋಮವಾರ ಸೆನ್ಸೆಕ್ಸ್ 41,528.91ರಲ್ಲೂ, ನಿಫ್ಟಿ 12,224.55ರಲ್ಲೂ ವಹಿವಾಟು ಕೊನೆಗೊಳಿಸಿತ್ತು.
ಕರೆನ್ಸಿ ಮಾರುಕಟ್ಟೆಯಲ್ಲಿ ಬೆಳಗ್ಗಿನ ವಹಿವಾಟಿನ ವೇಳೆ ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಅಪಮೌಲ್ಯವಾಗಿದ್ದು, ವಹಿವಾಟು ಮುಂದುವರಿದಿದೆ. (ಏಜೆನ್ಸೀಸ್)