ಮಹಾತ್ಮರ ಜಯಂತಿಗೆ ರಜೆ ಬೇಡ

ಬೀದರ್: ಮಹಾತ್ಮರ ಜಯಂತಿ ದಿನ ರಜೆ ನೀಡುವುದು ಸರಿಯಲ್ಲ. ಅಂದು ಅವರ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವಂಥ ಕಾರ್ಯ ನಿರಂತರ ನಡೆಯಬೇಕು ಎಂದು ಹಿರಿಯ ಸಾಹಿತಿ ಡಾ. ವಜ್ರಾ ಪಾಟೀಲ್ ಸಲಹೆ ನೀಡಿದ್ದಾರೆ.

ಜನವಾಡ ರಸ್ತೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 150ನೇ ವರ್ಷಾಚರಣೆ, ಕರ್ನಲ್ ಧ್ಯಾನಚಂದ್ ಜಯಂತಿ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿದ ಅವರು, ಮಹಾತ್ಮರ ಜಯಂತಿಗೆ ರಜೆ ಘೋಷಿಸುವುದರಿಂದ ಮಕ್ಕಳು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಹೀಗಾದರೆ ಅವರಿಗೆ ಜಯಂತಿ ವಿಶೇಷ, ಮಹಾತ್ಮರ ಉದಾತ್ತ ಚಿಂತನೆ ಗೊತ್ತಾಗುವುದಿಲ್ಲ. ರಜೆ ಬದಲು ಅಂದು ದಿನವಿಡಿ ಮಹಾತ್ಮರ ಆದರ್ಶ ಕುರಿತು ಜಾಗೃತಿ ಮೂಡಿಸುವಂಥ ಕೆಲಸ ಆಗಬೇಕು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.

ಸತ್ಯ ಹರಿಶ್ಚಂದ್ರ, ಶ್ರವಣಕುಮಾರ ನಾಟಕದ ಪ್ರಭಾವಕ್ಕೊಳಗಾಗಿ ಗಾಂಧೀಜಿ ತಮ್ಮ ಜೀವನದ ದಿಕ್ಕನ್ನೇ ಬದಲಿಸಿಕೊಂಡರು. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿ ಸೇವೆಗೈದರು. ಸತ್ಯ, ಶಾಂತಿ ಮತ್ತು ಸತ್ಯಾಗ್ರಹ ಅವರ ಮೂಲಮಂತ್ರಗಳಾಗಿದ್ದವು ಎಂದು ಹೇಳಿದರು.

ಕ್ರೀಡಾ ದಿನಾಚರಣೆ ಹಾಗೂ ಧ್ಯಾನಚಂದ್ ಸಾಧನೆಯನ್ನು ಪ್ರಾಧ್ಯಾಪಕ ಸಂಜೀವಕುಮಾರ ಅಪ್ಪೆ ವಿವರಿಸಿದರು. ಡಾ.ವಿದ್ಯಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಿನಿ ಕಾಜಿ ಪ್ರಾಸ್ತಾವಿಕ ಮಾತನಾಡಿದರು. ಉಮಾದೇವಿ ಸ್ವಾಗತಿಸಿದರು. ಸುಂದರಲಾಲ್ ನಿರೂಪಣೆ ಮಾಡಿದರು. ಮನೋಜಕುಮಾರ ವಂದಿಸಿದರು. ಸಕರ್ಾರಿ ಪ್ರಥಮ ದರ್ಜೆ ಬಾಲಕಿಯರ ಕಾಲೇಜು, ನೀಲಮ್ಮನ ಬಳಗ ಹಾಗೂ ಬಸವ ಸೇವಾ ಪ್ರತಿಷ್ಠಾನದಿಂದ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *