ಕನ್ನಡ ಚಿತ್ರರಂಗದಿಂದ ಮತ್ತೆ ನೆರವಿನ ನಿರೀಕ್ಷೆಯಲ್ಲಿ ನಟಿ ವಿಜಯಲಕ್ಷ್ಮಿ

ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟಿ ವಿಜಯಲಕ್ಷ್ಮೀ ಅವರು ಮತ್ತೆ ಸ್ಯಾಂಡಲ್‌ವುಡ್‌ ಕಲಾವಿದರಿಂದ ಸಹಾಯ ಕೇಳುತ್ತಿದ್ದಾರೆ.

ನನಗೆ ಮನೆ ಇಲ್ಲ. ಮನೆಗೆ ಅಡ್ವಾನ್ಸ್ ಕೊಡಲು ಹಣ ಇಲ್ಲ. ಊಟ ಸರಿಯಾಗಿ ತಿನ್ನದೆ ನನಗೆ ಅನಾರೋಗ್ಯ ಎದುರಾಗುತ್ತಿದೆ. ಸುದೀಪ್ ಸರ್‌ ಅವರನ್ನು ಬಿಟ್ಟರೆ ಯಾಕೆ ಯಾರೂ ನನಗೆ ಸಹಾಯ ಮಾಡುತ್ತಿಲ್ಲ. ಶಿವಣ್ಣ, ರಾಘಣ್ಣ, ಪುನೀತ್, ದರ್ಶನ್, ಯಶ್ ಎಲ್ಲರೂ ಇದಾರೆ. ಆದರೂ ಯಾಕೆ ಯಾರೂ ಸಹಾಯ ಮಾಡಲು ಬರುತ್ತಿಲ್ಲ ಎಂದು ಕೇಳಿದ್ದಾರೆ.

ಡಾ. ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರನ್ನ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಂಡಸ್ಟ್ರಿಯಲ್ಲಿ ಸುದೀಪ್ ಸರ್‌ ಅವರನ್ನು ಬಿಟ್ಟು ಯಾಕೆ ಬೇರೆ ಯಾರಿಗೂ ನನ್ನ ಮೇಲೆ ಕರುಣೆ ಬಂದಿಲ್ಲ. ನನಗೆ ಮನೆ ಬೇಕು. ಪೀಸ್‌ಫುಲ್‌ ಜೀವನ ಬೇಕು ಎಂದು ಕನ್ನಡ ಚಿತ್ರರಂಗದಿಂದ ನೆರವಿನ ನಿರೀಕ್ಷೆಯಲ್ಲಿ ವಿಜಯಲಕ್ಷ್ಮಿ ದಿನಕಳೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)

ಕಿಚ್ಚ ಸುದೀಪ್ ಸಹಾಯಕ್ಕೆ ವಿಜಯಲಕ್ಷ್ಮೀ ಧನ್ಯವಾದ