More

  ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ ರಾಮಾಯಣದ ವಿಚಾರಗೋಷ್ಠಿ

  ಬೆಂಗಳೂರು: ಜೂನ್ 5ರಿಂದ 8ರ ತನಕ ಬೆಂಗಳೂರಿನಲ್ಲಿ ರಾಮಾಯಣ ಕುರಿತ ಗೋಷ್ಠಿ ಆಯೋಜಿತಗೊಂಡಿದೆ.

  ಇದನ್ನೂ ಓದಿ: ಉಚಿತ ಶಿಕ್ಷಣ ಕೊಡಿಸುವ ನೆಪದಲ್ಲಿ ಸಾಲ ಪಡೆದು ಕೋಟಿ ಕೋಟಿ ವಂಚನೆ!

  ಪೂರ್ಣಪ್ರಜ್ಞ ಸಂಶೋಧನಾ ಮಂದಿರ ಆಯೋಜಿಸಿರುವ ಈ ಗೋಷ್ಠಿ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ ಎಂದು ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕ ಡಾ. ಎ.ವಿ.ನಾಗಸಂಪಿಗೆ ಹಾಗೂ ನವದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಡಾ. ಶ್ರೀನಿವಾಸ ವರಖೇಡಿ ತಿಳಿಸಿದ್ದಾರೆ.

  ನಗರದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿಚಾರ ಸಂಕೀರ್ಣದ ಕುರಿತು ವಿವರ ನೀಡಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್​​ಚಂದ್ ಗೆಹಲೋಟ್ ಅವರು ವಿಚಾರಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.

  ಪೂರ್ಣಪ್ರಜ್ಞ ವಿದ್ಯಾಪೀಠದ ಪರಿಸರದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ ಪ್ರಾಯೋಜಿಸಲಿದೆ.

  ಇದನ್ನೂ ಓದಿ; ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?

  ದೇಶದ ವಿವಿಧ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ ಸಮಾಜದ ವಿವಿಧ ಸ್ಥರಗಳ ಗಣ್ಯರು ಗೋಷ್ಠಿಯಲ್ಲಿ ಪ್ರಬಂಧ ಮಂಡನೆ ಮಾಡಲಿದ್ದಾರೆ. ವಾಲ್ಮೀಕಿ ರಾಮಾಯಣ ಒಳಗೊಂಡಂತೆ ಅನೇಕ ಭಾಷೆಗಳಲ್ಲಿ ಕವಿಗಳು, ಸಂತರು ಪ್ರಚುರಪಡಿಸಿದ ರಾಮಾಯಣಗಳನ್ನು ಆಧರಿಸಿ ಈ ಗೋಷ್ಠಿ ನಡೆಯುತ್ತದೆ.

  ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಭಾರತೀಯ ತತ್ವಶಾಸ್ತ್ರ ಅನುಸಂಧಾನ ಪರಿಷತ್ ಕೂಡ ಈ ಗೋಷ್ಠಿಗೆ ಎಲ್ಲ ರೀತಿಯಿಂದಲೂ ನೆರವಾಗುತ್ತಿದೆ. ಜಿಜ್ಞಾಸುಗಳೆಲ್ಲರಿಗೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಎ.ವಿ.ನಾಗಸಂಪಿಗೆ ಹಾಗೂ ಶ್ರೀನಿವಾಸ ವರಖೇಡಿ ಮನವಿ ಮಾಡಿದರು.(ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts