ಸೆಲ್ಫಿ ತೆಗೆಯಲು ಹೋದಾಗ ಉಳ್ಳಾಲ ಬೀಚ್​ನಲ್ಲಿ ನೀರು ಪಾಲಾದ ಮಗು

ಉಳ್ಳಾಲ: ಸಮುದ್ರದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ನಾಲ್ಕು ವರ್ಷದ ಮಗುವೊಂದು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ.

ಉಳ್ಳಾಲ ಸೋಮೇಶ್ವರ ಬೀಚ್​ನಲ್ಲಿ ಸೋಮವಾರ ಘಟನೆ ನಡೆದಿದ್ದು, ಮೈತ್ರಿ ಕೇದ್ಕಾರ್ ಎಂಬ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮೃತ ಬಾಲಕನ ತಂದೆ ಚಿಂತಾಮಣಿ ತಾಯಿ ಶ್ರದ್ಧಾ ಮತ್ತು ಸೋದರಿ ಗಾರ್ಗಿ ಕೇದ್ಕಾರ್ಗೆ (6) ಅವರನ್ನು ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯವರಾದ ದಂಪತಿ ಹಾಗೂ ಹೆಣ್ಣು ಮಗುವನ್ನು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್)