ಬಾಳೆಹೊನ್ನೂರು: ಟೈಲರ್ ವೃತ್ತಿಯಿಂದ ಮಹಿಳೆ, ಪುರುಷರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಿದೆ ಎಂದು ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.
ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ವಿಶ್ವ ಟೈಲರ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟೈಲರ್ ವೃತ್ತಿ ಒಂದು ವಿಶೇಷ ವೃತ್ತಿಯಾಗಿದ್ದು, ಮನುಷ್ಯನ ಅಂದ ಹೆಚ್ಚಿಸುವ ಕೆಲಸವ ಕೆಲಸ ಮಾಡುತ್ತದೆ. ಟೈಲರ್‌ಗಳು ಅಂದವಾದ ಬಟ್ಟೆ ಹೊಲಿದರೆ ಮಾತ್ರ ನಮ್ಮ ವ್ಯಕ್ತಿತ್ವವೂ ಅಂದವಾಗಿ ಕಾಣಲು ಸಾಧ್ಯವಿದೆ.
ಬಟ್ಟೆ ಉದ್ಯಮದಲ್ಲಿ ಟೈಲರ್‌ಗಳ ಪ್ರಮುಖ ಪಾತ್ರ ಗುರುತಿಸಲು ಪ್ರತಿ ವರ್ಷ ಫೆ.28ರಂದು ವಿಶ್ವ ಟೈಲರ್ ದಿನ ಆಚರಿಸುತ್ತಿದ್ದು, ಟೈಲರ್ ಎಂಬ ಪದವು ಅತ್ಯಂತ ಶ್ರೀಮಂತ ಇತಿಹಾಸ ಹೊಂದಿದೆ. ಈ ದಿನಾಚರಣೆಯು ಹೊಲಿಗೆ ಯಂತ್ರದ ಸಂಶೋಧಕ ವಿಲಿಯಂ ಎಲಿಯಾಸ್ ಹೋವೆ ಅವರ ಜನ್ಮ ದಿನಾಚರಣೆಯೂ ಆಗಿರುವುದು ವಿಶೇಷವಾಗಿದೆ. ಟೈಲರಿಂಗ್ ವೃತ್ತಿಗೆ ಇಂದು ಮಾರುಕಟ್ಟೆಯಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ವೃತ್ತಿಯ ಮೂಲಕ ವಿಭಿನ್ನವಾದ ಉಡುಪುಗಳನ್ನು ಹೊಲಿದು ಆರ್ಥಿಕ ಸ್ವಾವಲಂಬನೆ ಸಾಧಿಸುವುದರೊಂದಿಗೆ ಉತ್ತಮ ಹೆಸರು ಸಹಗಳಿಸಬಹುದು ಎಂದರು.
ಅತ್ಯುತ್ತಮ ವಸ್ತ್ರ ವಿನ್ಯಾಸಕ ಶಾಹಿದ್ ಅವರನ್ನು ಗೌರವಿಸಲಾಯಿತು. ಜೇಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಪೂರ್ವಾಧ್ಯಕ್ಷ ಸುಧಾಕರ್, ಸತೀಶ್ ಅರಳೀಕೊಪ್ಪ, ಕಾರ್ಯದರ್ಶಿ ವಿ.ಅಶೋಕ, ಟೈಲರ್ ಸಂಘದ ಮುಖಂಡ ಶೇಖರ್ ಇಟ್ಟಿಗೆ ಮತ್ತಿತರರು ಹಾಜರಿದ್ದರು.
