More

  ಸೀರೆಗೆ ಸರಿಸಾಟಿ ಯಾರು ಹೇಳುವೆಯಾ ನಾರಿ?

  ವಿಜಯವಾಣಿ ಕಚೇರಿಯಲ್ಲಿ ಲಕ್ಕಿಡಿಪ್ ಕಾರ್ಯಕ್ರಮ ದಾವಣಗೆರೆ 4 ತಾಲೂಕುಗಳಿಂದ 20 ಅದೃಷ್ಟಶಾಲಿ ಸ್ತ್ರೀಯರ ಆಯ್ಕೆ

  ವಿಜಯವಾಣಿ ಸುದ್ದಿಜಾಲ ದಾವಣಗೆರೆ

  ಉಟ್ಟರೆ ಸೀರೆಯಾದೆ, ಹಾಸಿದರೆ ಹಾಸಿಗೆಯಾದೆ, ಹೊದ್ದರೆ ಹೊದಿಕೆಯಾದೆ, ಹೊಸೆದರೆ ಹಗ್ಗವಾದೆ, ಬಿಗಿದರೆ ನೇಣಾದೆ.

  ಸೀರೆಯ ಉಪಯುಕ್ತತೆ ಮತ್ತು ವಿಶೇಷತೆಯನ್ನು ತಿಳಿಸುವ ಈ ಸಾಲನ್ನು ಹೇಳಿದವರು ನಗರದ ಎಸ್.ಎಸ್. ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥೆ, ಲೇಖಕಿ ಡಾ. ಶಶಿಕಲಾ ಕೃಷ್ಣಮೂರ್ತಿ.

  ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಯಿಂದ ಆಯೋಜಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಲು ಬುಧವಾರ ಪತ್ರಿಕೆಯ ಕಚೇರಿಯಲ್ಲಿ ನಡೆದ ಲಕ್ಕಿ ಡಿಪ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಸೀರೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬವೂ ಹೌದು. ಮಹಿಳೆಯರಿಗೆ ಸೀರೆ ಎಂದರೆ ಬಹಳ ಪ್ರೀತಿ. ಅದರಲ್ಲೂ ತವರಿನ ಸೀರೆಯ ಬಗ್ಗೆ ವಿಶೇಷ ಬಾಂಧವ್ಯ ಎಂದರು.

  ಮಹಿಳೆಯನ್ನು ಪ್ರಕೃತಿಗೆ ಹೋಲಿಸುತ್ತೇವೆ. ಹಲವು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಆಕೆಗಿರುತ್ತದೆ. ವಿಜಯವಾಣಿ ಹಮ್ಮಿಕೊಂಡ ‘ನಾರಿ ನಿನಗೊಂದು ಸ್ಯಾರಿ’ ಕಾರ್ಯಕ್ರಮ ಮಹಿಳೆಯರ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ಸೀರೆ ಸೀರೆಯಾಗೇ ಇರಲಿ, ಅದು ಉರುಳಾಗುವುದು ಬೇಡ ಎನ್ನುವ ಮೂಲಕ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದರು. ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ ಆತ್ಮಸ್ಥೈರ್ಯ ತುಂಬುವ ಅಗತ್ಯವಿದೆ ಎಂದರು.

  ಮಹಿಳೆಯರಲ್ಲಿ ಓದುವ, ಬರೆಯುವ ಹವ್ಯಾಸ ಬೆಳೆಸಬೇಕು, ಈ ನಿಟ್ಟಿನಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಓದುವುದರಿಂದ ಸಾಮಾನ್ಯ ಜ್ಞಾನವೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

  ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆಯ ವಿಶೇಷ ವರದಿಗಾರ ರಮೇಶ ಜಹಗೀರದಾರ್ ಸ್ವಾಗತಿಸಿದರು, ಚಿತ್ರದುರ್ಗದ ವಿಶೇಷ ವರದಿಗಾರ ನಾಗರಾಜ ಶ್ರೇಷ್ಠಿ ವಂದಿಸಿದರು. ಮುಖ್ಯ ಉಪ ಸಂಪಾದಕ ಹರ್ಷ ಪುರೋಹಿತ ನಿರೂಪಿಸಿದರು. ಜಾಹೀರಾತು ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಲಕ್ಕಿ ಡಿಪ್ ನಿರ್ವಹಣೆ ಮಾಡಿದರು. ಜಾಹೀರಾತು ವಿಭಾಗದ ಸೀನಿಯರ್ ಆಫೀಸರ್ ಶಶಿಧರ ಮೂರ್ತಿ, ಹಿರಿಯ ವರದಿಗಾರ ಡಿ.ಎಂ. ಮಹೇಶ್ ಹಾಗೂ ಸಿಬ್ಬಂದಿ ಇದ್ದರು.


  ಸೇವಾ ಮನೋಭಾವ ಮಹಿಳೆಯರ ಡಿ.ಎನ್.ಎ.ನಲ್ಲಿದೆ. ಕುಟುಂಬದ ಜವಾಬ್ದಾರಿ ನಿಭಾಯಿಸುವ, ಮನೆ ಮಂದಿಯ ಯೋಗಕ್ಷೇಮ ನೋಡಿಕೊಳ್ಳುವ ಗುಣ ಅವರಲ್ಲಿದೆ. ನಾರಿಯರು ನೆಮ್ಮದಿಯಿಂದ ಇದ್ದರೆ ದೇಶವೂ ಸುಭಿಕ್ಷವಾಗಿರುತ್ತದೆ. ಮನೆಯಲ್ಲಿ ಶಾಂತಿ, ಸಮಾಧಾನ ನೆಲೆಸುವಂತೆ ಮಾಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ಸುಶಿಕ್ಷಿತರಾಗಬೇಕು, ಸ್ವಾವಲಂಬಿಗಳಾಗಬೇಕು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

  -ಬಿ.ಬಿ. ಸರೋಜಾ, ದಾವಣಗೆರೆ ವಿವಿ ಕುಲಸಚಿವೆ

  • ತೊಟ್ಟಿಲು ತೂಗುವ ಕೈಗಳು ದೇಶವನ್ನು ಆಳಬಲ್ಲವು. ನಾರಿ ನಿನಗೊಂದು ಸ್ಯಾರಿ ಕಾರ್ಯಕ್ರಮದ ಮೂಲಕ ‘ವಿಜಯವಾಣಿ’ ಪತ್ರಿಕೆ ಮಹಿಳೆಯರಲ್ಲಿ ಓದುವ ಮನೋಭಾವ ಬೆಳೆಸುವ ಜತೆಗೆ ಮನೋಲ್ಲಾಸ ಮೂಡಿಸುತ್ತಿದೆ. ಇಂಥ ಕಾರ್ಯಕ್ರಮಗಳು ಹೆಚ್ಚಾಗಬೇಕು. ಮಹಿಳೆಯರ ಬದುಕಿನಲ್ಲಿ ಸೀರೆಗೆ ಬಹಳ ಮಹತ್ವವಿದೆ.
  • – ಡಾ. ಆರತಿ ಸುಂದರೇಶ್, ಹೋಮಿಯೋಪತಿ ವೈದ್ಯೆ

  ಬಹುಮಾನಕ್ಕಾಗಿ ಸಂಪರ್ಕಿಸಬೇಕಾದ ಮೊ.ನಂ: 8884432468

  ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ವಿಜೇತರ ವಿವರ

  • ದಾವಣಗೆರೆ ತಾಲೂಕು:
  1. ಮಾನಸಾ ಕೆ. ಚಿಗಟೇರಿ, ದಾವಣಗೆರೆ.
  2. ಬಿ.ಎಸ್. ಪಾರ್ವತಮ್ಮ, ದಾವಣಗೆರೆ.
  3. ಜಿ.ಕೆ.ದೀಪಾ, ದಾವಣಗೆರೆ,
  4. ಸುಶೀಲಮ್ಮ, ದಾವಣಗೆರೆ
  5. ಎನ್. ಮಂಜಮ್ಮ, ದಾವಣಗೆರೆ.
  • ಹರಿಹರ ತಾಲೂಕು:
  1. ಬಿ. ಜ್ಯೋತಿ, ಹರಿಹರ
  2. ಭಾನುಮತಿ, ಮಲೇಬೆನ್ನೂರು.
  3. ಸಿ.ಎಂ. ಪೂರ್ಣಿಮಾ, ಹರಿಹರ
  4. ಕೆ.ಎಂ. ಕವಿತಾ, ಗುತ್ತೂರು.
  5. ರತ್ನಮ್ಮ, ಹರಿಹರ.
  • ಜಗಳೂರು ತಾಲೂಕು:
  1. ಬಿ. ಕಾಳಮ್ಮ, ಜಗಳೂರು.
  2. ಎನ್. ಸಿಂಧೂ, ಬಿಳಿಚೋಡು.
  3. ಎನ್. ಎಸ್.ಕಾವ್ಯಾ, ಜಗಳೂರು.
  4. ಎಂ.ಟಿ. ಅನಸೂಯ, ಜಗಳೂರು.
  5. ಎಚ್.ಜಿ.ಚಂಪಾರಾಣಿ , ಜಗಳೂರು.
  • ಚನ್ನಗಿರಿ ತಾಲೂಕು:
  1. ಕವಿತಾ, ನಲ್ಲೂರು.
  2. ನೇತ್ರಾವತಿ, ಮರಬನಹಳ್ಳಿ,
  3. ಎಂ.ಕೆ. ಅಂಜಲಿ, ಬಸವಾಪಟ್ಟಣ.
  4. ಬಿ.ಆರ್. ಪುಷ್ಪಾ, ಗೊಪ್ಪೇನಹಳ್ಳಿ,
  5. ಇಂದಿರಮ್ಮ, ಹಿರೇಕೋಗಲೂರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts