ಹಾನಗಲ್ಲ: ಭಾರತ ಜ್ಞಾನ-ವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷರಾಗಿ ಶಿಕ್ಷಕ ಎಸ್.ವಿ. ಹೊಸಮನಿ ಅಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಗುರುಭವನದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿ ಆಯೋಜಿಸಿದ್ದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹಿರಿಯ ರಂಗ ಕಲಾವಿದ ಪ್ರಭು ಗುರುಪ್ಪನವರ ಅವರನ್ನು ತಾಲೂಕು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಗಿರೀಶ ದೊಡ್ಡಮನಿ, ಎಸ್.ಎಫ್. ಕಠಾರಿ (ಉಪಾಧ್ಯಕ್ಷ), ರಂಜಿತಾ ಶೇಟ್ (ಕಾಯದರ್ಶಿ), ಎಂ.ಎಸ್. ಅಮರದ (ಖಜಾಂಚಿ), ರಮೇಶ ಅರಬಾಳ, ರಾಮು ಗೂರನವರ (ಸಂಘಟನಾ ಕಾರ್ಯದರ್ಶಿ), ಎಸ್. ಹಾಲೇಶ, ಕುಮಾರ ಬಡಿಗೇರ (ಸಂಚಾಲಕರು), ಸುನೀತಾ ಉಪ್ಪಿನ, ಎಚ್.ಸುಧಾ (ಸಾಂಸ್ಕೃತಿಕ ಕಾರ್ಯದರ್ಶಿ), ಎಂ.ಎಂ. ಹೋತನಹಳ್ಳಿ, ರೇಖಾ ತಿರುಮಲೆ, ಮಧು ಅಪ್ಪಣ್ಣನವರ, ಜ್ಯೋತಿ ಸುರಳೇಶ್ವರ (ನಿರ್ದೇಶಕರು) ಆಯ್ಕೆಯಾದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ಮಾರುತಿ ಶಿಡ್ಲಾಪೂರ, ಸಿ. ಮಂಜುನಾಥ, ಅಶೋಕ ದಾಸರ, ದೀಪಾ ಗೋನಾಳ, ಎಂ. ಪ್ರಸನ್ನಕುಮಾರ, ಶೀಲಾ ಗಾಣಿಗೇರ, ಮಹೇಶ ಹೊನಕೇರಿ ಅವರು ಗೌರವ ಸಲಹೆಗಾರರಾಗಿ ಆಯ್ಕೆಯಾದರು.