ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆ

ಹಳಿಯಾಳ: ಹದಿನೈದು ವರ್ಷದೊಳಗಿನವರ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್​ಶಿಪ್ ಸ್ಪರ್ಧೆಗೆ ಜಿಲ್ಲಾ ಕುಸ್ತಿ ಅಖಾಡಾದಿಂದ ಆರು ಕುಸ್ತಿ ಪಟುಗಳು ಪಾಲ್ಗೊಳ್ಳಲಿದ್ದಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿನ ಚೌದರಿ ಚರಣಸಿಂಗ್ ವಿಶ್ವವಿದ್ಯಾಲಯದಲ್ಲಿ ಜೂನ್ 15ರಿಂದ 17ರವರೆಗೆ ಈ ಕುಸ್ತಿ ಪಂದ್ಯಾವಳಿ ಜರುಗಲಿದೆ.  ಆಖಾಡಾದ ಪೈಲವಾನರು: ಅಕ್ಷತಾ ತೋರಸ್ಕರ (33ಕೆ.ಜಿ), ಶಾಲಿನಿ ಸಿದ್ದಿ (39ಕೆ.ಜಿ), ರೂಪಾ ಕೊಲೇಕರ (42ಕೆ.ಜಿ), ನಿಕಿತಾ ಡೆಪಿ(50ಕೆ.ಜಿ), ಸುಜಾತಾ ಪಾಟೀಲ (58ಕೆ.ಜಿ), ರೋಹಣ ದೊಡ್ಮಣಿ (41ಕೆ.ಜಿ. ಫ್ರೀ ಸ್ಟೈಲ್), ಸುಲೇಮಾನ ದೇವಕಾರ್ಯ (48ಕೆ.ಜಿ. ಗ್ರೀಕ್ ರೋಮನ್) ಅವರು ಹಳಿಯಾಳದ ಆಖಾಡಾವನ್ನು ಪ್ರತಿನಿಧಿಸಲಿದ್ದಾರೆ ಎಂದು ಕುಸ್ತಿ ಕೋಚ್, ಯುವ ಸಬಲೀಕರಣ, ಕ್ರೀಡಾ ವಸತಿ ನಿಲಯದ ಅಧಿಕಾರಿ ಕಾಡೇಶ ನ್ಯಾಮಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *