
ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಸಂಕಷ್ಟದಲ್ಲಿ ಸಿಲುಕಿದ ಮಂದಿಗೆ ಲೆಕ್ಕವಿಲ್ಲ. ಇಂಥವರಿಗೆ ಹಲವಾರು ಮಂದಿ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿರುವುದುಂಟು. ಆಹಾರ ಕಿಟ್ ನೀಡುವುದು, ದೈನಂದಿನ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಇವರೆಲ್ಲರಿಗೆ ವಿಶೇಷವಾಗಿ ಕಾಣಸಿಗುತ್ತಾರೆ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್. ಮನೆಯಲ್ಲೇ ತಿಂಡಿ ತಯಾರಿಸಿ ವಲಸೆ ಕಾರ್ಮಿಕರಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕುಟುಂಬದ ಎಲ್ಲ ಸದಸ್ಯರು ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ: VIDEO: 50 ಪ್ರಯತ್ನಗಳ ಬಳಿಕ ಕ್ಲಿಕ್ ಆದ ವಾರ್ನರ್ ದಂಪತಿ ಡ್ಯಾನ್ಸ್
ವೀರೇಂದ್ರ ಸೆಹ್ವಾಗ್ ತಮ್ಮ ಫೌಂಡೇಷನ್ ಮೂಲಕ ನೂರಾರು ವಲಸೆ ಕಾರ್ಮಿಕರಿಗೆ ಊಟ ನೀಡುವ ಮೂಲಕ ಹಸಿವು ನೀಗಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲಾತಾಣಗಳಲ್ಲಿ ಸೆಹ್ವಾಗ್ ಹಂಚಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. 41 ವರ್ಷದ ಸೆಹ್ವಾಗ್ ಪತ್ನಿ, ತಾಯಿ ಹಾಗೂ ಮಕ್ಕಳ ನೆರವಿಂದ ತಿಂಡಿ ಪೊಟ್ಟಣ ತಯಾರಿಸಿ ನೂರಾರು ವಲಸೆ ಕಾರ್ಮಿಕರಿಗೆ ಹಂಚಿದ್ದಾರೆ. ಇಂಥ ಕಾರ್ಯದಲ್ಲಿ ಸೆಹ್ವಾಗ್ ಫೌಂಡೇಷನ್ ಜತೆಗೆ ಕೈ ಜೋಡಿಸಿ ಅಂತಾನೂ ಸೆಹ್ವಾಗ್ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಕ್ರೀಡೆ ಬಗ್ಗೆ ಮಾತನಾಡಲ್ವಂತೆ ಕಾರ್ತಿಕ್-ದೀಪಿಕಾ ದಂಪತಿ!
ಕ್ರಿಕೆಟ್ ವಲಯದಿಂದ ಶ್ಲಾಘನೆ
ಸೆಹ್ವಾಗ್ ಸಾಮಾಜಿಕ ಕಾರ್ಯಕ್ಕೆ ಕ್ರಿಕೆಟ್ ವಲಯ ಶ್ಲಾಘನೆ ವ್ಯಕ್ತಪಡಿಸಿದೆ. ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವೆಲ್‌ಡನ್ ಲಾಲಾ ಎಂದು ಹೇಳಿದ್ದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಯಾಂಕ್ ದಾಗರ್, ನಿಮ್ಮ ಕಾರ್ಯಗಳು ನಮಗೆ ಸ್ಫೂರ್ತಿ ಸರ್ ಎಂದಿದ್ದಾರೆ. ಜತೆಗೆ ಸಾವಿರಾರು ಅಭಿಮಾನಿಗಳು ಸೆಹ್ವಾಗ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ತಂಡದ ಪರ ಸೆಹ್ವಾಗ್ 251 ಏಕದಿನ ಪಂದ್ಯಗಳಿಂದ 8273 ರನ್ ಹಾಗೂ 104 ಟೆಸ್ಟ್ ಪಂದ್ಯಗಳಿಂದ 8586 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 2 ತ್ರಿಶತಕ ಸಿಡಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ಎನಿಸಿದ್ದಾರೆ.