ಬಾರೆಹಣ್ಣಿನ ಬೀಜ ಗಂಟಲಲ್ಲಿ ಸಿಲುಕಿ ಮೃತಪಟ್ಟ ಎರಡು ವರ್ಷದ ಮಗು

ಬಳ್ಳಾರಿ: ಬಾರೆ ಹಣ್ಣಿನ ಬೀಜ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟ ಧಾರುಣ ಘಟನೆ ಕೂಡ್ಲಿಗಿ ತಾಲೂಕಿನ ಬೀರಲಗುಡ್ಡದಲ್ಲಿ ನಡೆದಿದೆ.

ಶರತ್​ ಮೃತ ಬಾಲಕ. ಬಾರೆ ಹಣ್ಣು ತಿಂದ ಬಳಿಕ ಬೀಜ ಗಂಟಲಲ್ಲಿ ಸಿಕ್ಕಿಕೊಂಡಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾದರೂ ಅಷ್ಟೊತ್ತಿಗಾಗಲೇ ಬಾಲಕನ ಪ್ರಾಣ ಹೋಗಿತ್ತು ಎನ್ನಲಾಗಿದೆ.