More

  ಬೀಜ ಸಂಸ್ಕರಣ ಘಟಕ ಸ್ಥಾಪನೆಗೆ ಚಿಂತನೆ

  ಕೊಟ್ಟೂರು: ರಾಜ್ಯ ಬೀಜ ನಿಗಮದಿಂದ ಕೊಟ್ಟೂರು ತಾಲೂಕಿನ ರಾಂಪುರ ಮತ್ತು ಉಜ್ಜಿನಿಯಲ್ಲಿ 50 ಲಕ್ಷ ರೂ. ವೆಚ್ಚದ ಬೀಜ ಸಂಸ್ಕರಣ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ರಾಜ್ಯ ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಹೇಳಿದರು.

  ಇದನ್ನೂ ಓದಿ: ಗೇರುಬೀಜ ಸಂಸ್ಕರಣೆ ಹಾಗೂ ರಪ್ತುದಾರರ ವಾರ್ಷಿಕ ಸಮ್ಮೇಳನ

  ಸಂಸ್ಕರಣ ಘಟಕ ಸ್ಥಾಪನೆಗೆ ರಾಂಪುರ ಗ್ರಾಮದ ಸಹಕಾರ ಸಂಘದವರು ಖಾಲಿ ನಿವೇಶನ ಕೊಡಲು ಮುಂದಾಗಿದ್ದು, ಉಜ್ಜಿನಿಯಲ್ಲಿ ಸಹಕಾರ ಸಂಘದವರು ಖಾಲಿ ನಿವೇಶನ ಕೊಡಲು ಮುಂದಾದರೆ ಶೀಘ್ರದಲ್ಲಿ ಘಟಕಗಳ ಸ್ಥಾಪನೆ ನಿಗಮ ಮುಂದಾಗಲಿದೆ.

  ಕಳೆದ ವರ್ಷ ಕೊಟ್ಟೂರು ತಾಲೂಕಿನ ತೂಲಹಳ್ಳಿಯಲ್ಲಿ ಮತ್ತು ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿತ್ತು ರೈತರು ಬೆಳದ ಬೀಜಗಳನ್ನು ಈ ಘಟಕದಲ್ಲಿ ಸಂಸ್ಕರಣಗೊಳಿಸಿ ಮಾರಾಟ ಮಾಡಲು ಹೆಚ್ಚು ಅನುಕೂಲವಾಗಲಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts