More

    ಇರಾನ್​ ಭದ್ರತಾ ಪಡೆ ಯೋಧರು ಬಂಧಿಸಿದ ಸ್ಥೂಲಕಾಯದ ಐಸಿಸ್​ ಉಗ್ರ ನಾಯಕನನ್ನು ರವಾನಿಸಿದ್ದು ಯಾವುದರಲ್ಲಿ?

    ಬಾಗ್ದಾದ್​: ಸ್ಥೂಲಕಾಯದ ಐಸಿಸ್​ ಉಗ್ರಗಾಮಿಯನ್ನು ಬಂಧಿಸಿರುವ ಇರಾಕ್​ ಭದ್ರತಾ ಪಡೆ ಆತನನ್ನು ಬೃಹತ್​ ಗಾತ್ರದ ಟ್ರಕ್​ನಲ್ಲಿ ಸಾಗಿಸಿರುವ ಘಟನೆ ನಡೆದಿದೆ.
    ಮುಫ್ತಿ (ಶಿಫಾ ಅಲ್​-ನಿಮಾ) ಬಂಧಿತ ಸ್ಥೂಲಕಾಯದ ಉಗ್ರಗಾಮಿ ಸಂಘಟನೆ ನಾಯಕ. ಈತನ ಬಂಧನ ದೊಡ್ಡ ಕಾರ್ಯಾಚರಣೆ ಎಂದು ಭದ್ರತಾ ಪಡೆ ತಿಳಿಸಿದೆ.
    ಮುಫ್ತಿಯನ್ನು ಮೊಸುಲ್​ ಬೋಲ್​ಥೋಲ್​ನ ಅಡಗುದಾಣದಲ್ಲಿ ಪತ್ತೆ ಮಾಡಿ ಬಂಧಿಸಲಾಯಿತು. ನಂತರ ಆತನನ್ನು ಪೊಲೀಸ್​ ವಾಹನದಲ್ಲಿ ಸಾಗಿಸಲು ಮುಂದಾದರೂ ಆತನ ಸ್ಥೂಲಕಾಯದ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ ಕೊನೆಗೆ ಟ್ರಕ್​ನಲ್ಲಿ ಸಾಗಿಸಬೇಕಾಯಿತು.
    ಇರಾನ್​ನಲ್ಲಿ ವಿದ್ವಾಂಸರ ಹತ್ಯೆ ಹಾಗೂ ಮಸೀದಿ ಮೇಲೆ ನಡೆದ ಬಾಂಬ್​ ದಾಳಿಯಲ್ಲಿ ಈತನ ಪಾತ್ರ ಪ್ರಮುಖವಾಗಿದೆ. ಇರಾನಿನ ಪ್ರಾಚೀನ ಸಾಂಸ್ಕೃತಿಕ ತಾಣ ಪ್ರವಾದಿ ಜೋನ್ನಾ ಸಮಾಧಿ ಸೇರಿದಂತೆ ಇತರೆ ಐತಿಹಾಸಿಕ ತಾಣಗಳಲ್ಲಿ ವಿಧ್ವಂಸ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪ ಹೊರಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts