ಜಾತ್ಯತೀತ ತತ್ವ ಭಾರತೀಯರ ಡಿಎನ್​ಎಯಲ್ಲಿದೆ: ವೆಂಕಯ್ಯ ನಾಯ್ಡು

ನವದೆಹಲಿ: ಜಾತ್ಯತೀತ ತತ್ವ ಭಾರತದಲ್ಲಿ ಸುರಕ್ಷಿತವಾಗಿದೆ. ಕಾರಣ, ಭಾರತೀಯರ ಡಿಎನ್​ಎಯಲ್ಲೇ ಜಾತ್ಯತೀತ ತತ್ವ ಅಡಗಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯ ಕಾರ್ಯಕ್ರಮವೊಂದರಲ್ಲಿ ಸೋಮವಾರ ಮಾತನಾಡಿರುವ ಅವರು, ” ಜಾತ್ಯತೀತ ತತ್ವಕ್ಕೆ ಭಾರತದಲ್ಲಿ ಯಾವ ರೀತಿಯ ಧಕ್ಕೆಯುಂಟಾಗಿಲ್ಲ. ಅದು ಅತ್ಯಂತ ಸುಕ್ಷಿತವಾಗಿರುವುದೇ ಭಾರತದಲ್ಲಿ. ಅದು ನಮ್ಮ ಡಿಎನ್​ಎಯಲ್ಲೇ ಮಿಳಿತವಾಗಿದೆ. ದೇಶದಲ್ಲಿ ಸಂವಿಧಾನ ಅಸ್ತಿತ್ವದಲ್ಲಿರುವ ಕಾರಣಕ್ಕೋ, ನರೇಂದ್ರ ಮೋದಿ ಅವರ ಕಾರಣಕ್ಕೋ ಅಥವಾ ಯಾವುದೋ ಒಂದು ಪಕ್ಷದ ಕಾರಣಕ್ಕೋ ಅದು ಉಳಿದುಕೊಂಡಿಲ್ಲ,” ಎಂದು ಅವರು ಅಭಿಪ್ರಾಯಪಟ್ಟರು.

ಜಾತ್ಯತೀತೆಯ ಸೋಗಿನಲ್ಲಿ ಹಲವು ವಿಷಯಗಳನ್ನು ಅಪಥ್ಯಗೊಳಿಸುವುದನ್ನೂ ವೆಂಕಯ್ಯ ನಾಯ್ಡು ಅವರು ಇದೇ ವೇಳೆ ಆಕ್ಷೇಪಿಸಿದರು. ” ಜಗತ್ತಿನ ಇತರ ದೇಶಗಳು ಸಂಸ್ಕೃತ, ವೇದ ಮತ್ತು ಉಪನಿಷತ್ತುಗಳ ಮೇಲೆ ಅಧ್ಯಯನ ನಡೆಸುತ್ತಿವೆ. ಆದರೆ ಜಾತ್ಯತೀತತೆ ಹೆಸರಲ್ಲಿ ಅವುಗಳನ್ನು ಮುಟ್ಟಲು ಭಾರತದವರೇ ನಾಚಿಕೆಪಡುತ್ತಿದ್ದಾರೆ. ಜಾತ್ಯತೀತತೆ ಎಂಬುದು ಈ ವಿಚಾರಗಳಿಗೆಲ್ಲ ಹೇಗೆ ಸಂಬಂಧ ಪಡೆದುಕೊಂಡವು ಎಂದು ವೆಂಕಯ್ಯ ನಾಯ್ಡು ತೀವ್ರ ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *