ಯರಗಟ್ಟಿ: ಮುಗಳಿಹಾಳದಲ್ಲಿ ಕನಕಭವನ, ಗ್ರಾಮ ಪಂಚಾಯಿತಿ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿ ವಿವಿಧ ಕಾಮಗಾರಿಗೆ ಅಂದಾಜು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಗ್ರಾಮದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿನ ಪ್ರಮುಖ ರಸ್ತೆಗಳ ಅಭಿವೃದ್ಧಿ, ಶಾಲಾ-ಕಾಲೇಜು ಹಾಗೂ ಸಮುದಾಯ ಭವನ ನಿರ್ಮಾಣ ಸೇರಿ ಜನರ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಕೊಪ್ಪದ, ಉಪಾಧ್ಯಕ್ಷೆ ಚನ್ನವ್ವ ಕಡಕೋಳ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಕೆಎಂಎ್ ನಿರ್ದೇಶಕ ಶಂಕರ ಇಟ್ನಾಳ, ಸಿಡಿಪಿಒ ಸುನಿತಾ ಪಾಟೀಲ, ಬಸವರಾಜ ಅರಭಾವಿ, ಮಾರುತಿ ಅರಭಾವಿ, ಪಂಚಾಕ್ಷರಿ ಪಟ್ಟಣಶೆಟ್ಟಿ, ಬಸು ಹಸಬಿ, ಗೋಪಾಲ ದಳವಾಯಿ, ಗ್ರಾಪಂ ಸದಸ್ಯರಾದ ರಾಮಸಿದ್ದಪ್ಪ ಧರ್ಮಟ್ಟಿ, ನಾಗಪ್ಪ ಪುಂಜಿ, ರಾಮನಗೌಡ ಗಂಗರೆಡ್ಡಿ, ಶಿವಪ್ಪ ಇಟ್ನಾಳ, ಪದ್ಮಾವತಿ ಮುರಗಟ್ಟಿ, ಮಾನಿಂಗವ್ವ ಮಾಯಣ್ಣಿ ಇತರರಿದ್ದರು.