ಪಿಯು ರ‍್ಯಾಂಕ್ ವಿಜೇತರು: ವಿಜ್ಞಾನ-ರಜತ್​ ಕಶ್ಯಪ್​ ಎಸ್.​,ವಾಣಿಜ್ಯ- ಆಲ್ವಿಟಾ ಅನ್ಸಿಲಾ ಡಿಸೋಜಾ, ಕಲೆ-ಕುಸುಮ ಉಜ್ಜಿನಿ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದ ವಿಜ್ಞಾನ ವಿಭಾಗದಲ್ಲಿನ ಪ್ರಥಮ ರ‍್ಯಾಂಕ್ ಬೆಂಗಳೂರಿನ ಪದ್ಮನಾಭನಗರದ ಕುಮಾರನ್ಸ್​ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಜತ್​ ಕಶ್ಯಪ್​ ಎಸ್.​ ಪಾಲಾಗಿದೆ.
ಇದೇ ವಿಭಾಗದ ದ್ವಿತೀಯ ರ‍್ಯಾಂಕ್ ಅನ್ನು ಮಲ್ಲೇಶ್ವರದ 11ನೇ ಕ್ರಾಸ್​ನಲ್ಲಿರುವ ವಿದ್ಯಾಮಂದಿರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದಿವ್ಯಾ ಕೆ. ಪಡೆದುಕೊಂಡಿದ್ದಾರೆ. ಬೆಂಗಳೂರಿನ ಜಯನಗರ ಎನ್​ಎಂಕೆಆರ್​ವಿ ಆವರಣದಲ್ಲಿರುವ ಆರ್​.ವಿ. ಪಿಯು ಕಾಲೇಜಿನ ಪ್ರಿಯಾ ನಾಯಕ್​ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಆಲ್ವಿಟಾ ಅನ್ಸಿಲಾ ಡಿಸೋಜಾ ವಾಣಿಜ್ಯ ವಿಭಾಗದಲ್ಲಿ ಪ್ರಥಮ
ಮಂಗಳೂರಿನ ಮೂಡಬಿದರಿಯ ಆಳ್ವಾಸ್​ ಪಿಯು ಕಾಲೇಜಿನ ಆಲ್ವಿಟಾ ಅನ್ಸಿಲಾ ಡಿಸೋಜಾ 596 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜಿನ ಶ್ರೀ ಕೃಷ್ಣ ಶರ್ಮ ಕೆ 596 ಅಂಕಗಳೊಂದಿಗೆ 2ನೇ ಸ್ಥಾನ ಹಾಗೂ ಕೋಡಿಯಾಲ್​ಬೈಲಿನ ಕೆನರಾ ಪಿಯು ಕಾಲೇಜಿನ ಶ್ರೇಯಾ ಶಣೈ 595 ಅಂಕಗಳೊಂದಿಗೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಉತ್ತಮ ಸಾಧನೆ
ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಸ್ವತಂತ್ರ ಪದವಿಪೂರ್ವ ಕಾಲೇಜಿನ ಪಾಲಾಗಿದೆ. 594 ಅಂಕಗಳೊಂದಿಗೆ ಕುಸುಮ ಉಜ್ಜಿನಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 591 ಅಂಕ ಗಳಿಸಿರುವ ಹೊಸಮನಿ ಚಂದ್ರಪ್ಪ ಮತ್ತು ನಾಗರಾಜ್​ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಶ್ಯಪ್​
ದಿವ್ಯ