25.1 C
Bangalore
Friday, December 6, 2019

ಲಾರ್ಡ್ಸ್​ನಲ್ಲಿ ಭಾರತಕ್ಕೆ ಸೋಲು

Latest News

ಯೋಗ ತರಬೇತಿಗೆ ಆಸ್ಟ್ರೇಲಿಯಾದಿಂದ ಆಹ್ವಾನ, ಬಳ್ಳಾರಿ ಸಾಧನಾ ಯೋಗ ಕೇಂದ್ರದ ರೂಪಾ ಮುರಳೀಧರ್ ಹೇಳಿಕೆ

ಬಳ್ಳಾರಿ: ಆಸ್ಟ್ರೇಲಿಯಾದ ಜನರಿಗೆ ಯೋಗ ಪದ್ಧತಿ ಬಗ್ಗೆ ತುಂಬಾ ಆಸಕ್ತಿ ಇದೆ. ಸೇವಾ ಆಸ್ಟ್ರೇಲಿಯಾ ಸಂಸ್ಥೆ ಮೂಲಕ ಆಸ್ಟ್ರೇಲಿಯಾದಲ್ಲಿ ಯೋಗ ತರಬೇತಿ ನೀಡಲು...

ಸೆನ್ಸೆಕ್ಸ್​ 334 ಅಂಶಕ್ಕೂ ಹೆಚ್ಚು ಕುಸಿತ: ನಿಫ್ಟಿ 12,000ಕ್ಕೂ ಕೆಳಕ್ಕೆ…

ಮುಂಬೈ: ಷೇರುಪೇಟೆಯ ವಾರಾಂತ್ಯದ ದಿನದ ವಹಿವಾಟಿನ ಕೊನೆಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 334 ಅಂಶ ಕುಸಿತ ಮತ್ತು ನ್ಯಾಷನಲ್...

ಬಳ್ಳಾರಿ ಜಿಲ್ಲೆಯಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದ ಕೇಂದ್ರ ಅಧ್ಯಯನ ತಂಡ

ಬಳ್ಳಾರಿ: ನರೇಗಾ ರಾಷ್ಟ್ರೀಯ ಪ್ರಶಸ್ತಿ ಶಿಫಾರಸಿಗೆ ದೇಶದ ಒಂಬತ್ತು ಜಿಲ್ಲೆಗಳ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಶುಕ್ರವಾರ...

ಹಂಪಿ ವಿವಿ ಕೇಂದ್ರ ಸ್ಥಳಾಂತರ ಕೈಬಿಡಿ

ಬಾದಾಮಿ: ಬನಶಂಕರಿಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ...

ಅವೈಜ್ಞಾನಿಕ ಉಳುಮೆಯಿಂದ ಮಣ್ಣಿನ ಸವಕಳಿ, ಹೊಸಪೇಟೆ ಕೃಷಿ ಇಲಾಖೆ ಡಿಡಿ ಸಹದೇವ ಯರಗುಪ್ಪ ಹೇಳಿಕೆ

ಕೂಡ್ಲಿಗಿ: ರೈತರ ಜೀವನಕ್ಕೆ ಆಧಾರವಾಗಿರುವ ಮಣ್ಣಿನ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಕೃಷಿ ಇಲಾಖೆ ಹೊಸಪೇಟೆ ವಿಭಾಗದ ಉಪನಿರ್ದೇಶಕ ಸಹದೇವ ಯರಗುಪ್ಪ ಹೇಳಿದರು. ಪಟ್ಟಣದ...

ಲಂಡನ್: ಜೋ ರೂಟ್ (113 ರನ್, 116 ಎಸೆತ, 8 ಬೌಂಡರಿ, 1 ಸಿಕ್ಸರ್) ಶತಕ ಮತ್ತು ವೇಗಿ ಲಿಯಾಮ್ ಪ್ಲಂಕೆಟ್ (46ಕ್ಕೆ 4) ಬಿಗಿದಾಳಿಗೆ ಬೆಂಡಾದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 86 ರನ್ ಸೋಲು ಅನುಭವಿಸಿದೆ. ಇದರಿಂದ 3 ಪಂದ್ಯಗಳ ಸರಣಿ 1-1 ಸಮಬಲಗೊಂಡಿದೆ.

ಲಾರ್ಡ್ಸ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 7 ವಿಕೆಟ್​ಗೆ 322 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಪ್ರಮುಖ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಭರ್ತಿ 50 ಓವರ್​ಗಳಲ್ಲಿ 236 ರನ್​ಗೆ ಆಲೌಟ್ ಆಗಿ ಶರಣಾಯಿತು.

ರೂಟ್-ಮಾರ್ಗನ್ ಆಸರೆ: ಮೊದಲ ಪಂದ್ಯ ದಲ್ಲಿ ಆತಿಥೇಯರ ಪಾಲಿಗೆ ದುಃಸ್ವಪ್ನವಾಗಿದ್ದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ (68ಕ್ಕೆ 3) ಮತ್ತೊಮ್ಮೆ ಕಾಡಿದರು. ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಜೇಸನ್ ರಾಯ್ (40) ಹಾಗೂ ಬೇರ್​ಸ್ಟೋ (38) ಜೋಡಿಗೆ ಪೆವಿಲಿಯನ್ ದಾರಿ ತೋರಿದ ಕುಲದೀಪ್ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದರು. ಬಳಿಕ ಜತೆಯಾದ ರೂಟ್ ಹಾಗೂ ನಾಯಕ ಇವೋಯಿನ್ ಮಾರ್ಗನ್ (53 ರನ್, 51 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿ ಭಾರತದ ಲೆಕ್ಕಾಚಾರವನ್ನು ಉಲ್ಟಾ ಮಾಡಿತು. ಈ ಜೋಡಿ 3ನೇ ವಿಕೆಟ್​ಗೆ ಬಿರುಸಿನ 103 ರನ್ ಜತೆಯಾಟವಾಡಿ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ (5), ಜೋಸ್ ಬಟ್ಲರ್ (4) ಹಾಗೂ ಮೊಯಿನ್ ಅಲಿ (13) ವೈಫಲ್ಯ ಕಂಡರು. ಆಗ ರೂಟ್​ಗೆ ಜತೆಯಾದ ಡೇವಿಡ್ ವಿಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇಂಗ್ಲೆಂಡ್ ಓಟಕ್ಕೆ ಬ್ರೇಕ್ ಹಾಕಿ ಬೀಗುತ್ತಿದ್ದ ಭಾರತೀಯ ಬೌಲರ್​ಗಳನ್ನು ಈ ಜೋಡಿ ದಂಡಿಸಲು ಯಶಸ್ವಿಯಾಯಿತು. ಈ ಜೋಡಿ 7ನೇ ವಿಕೆಟ್​ಗೆ ಎದುರಿಸಿದ 50 ಎಸೆತಗಳಲ್ಲೇ 83 ರನ್ ಪೇರಿಸಿ ತಂಡದ ಮೊತ್ತವನ್ನು 320ರ ಗಡಿ ದಾಟಿಸಿತು.

ಭಾರತೀಯ ಬ್ಯಾಟ್ಸ್​ಮನ್​ಗಳ ವೈಫಲ್ಯ: ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಎಡವಿತು. ಆರಂಭಿಕರಿಂದ ಈ ಬಾರಿ ದಿಟ್ಟ ಆರಂಭ ಸಿಗಲಿಲ್ಲ. ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ ಖಾತೆ ತೆರೆಯದೆ ನಿರ್ಗಮಿಸಿದರೆ, ನಾಯಕ ವಿರಾಟ್ ಕೊಹ್ಲಿ (45) ಮತ್ತು ಸುರೇಶ್ ರೈನಾ (46) ಕೆಲಕಾಲ ಪ್ರತಿರೋಧ ಒಡ್ಡಿ ಔಟಾದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (21), ಎಂಎಸ್ ಧೋನಿ (37) ಹೋರಾಡಿದರೂ, ತಂಡದ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. -ಏಜೆನ್ಸೀಸ್

ಧೋನಿ 10 ಸಾವಿರ ರನ್

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 12ನೇ ಮತ್ತು ಭಾರತದ 4ನೇ ಬ್ಯಾಟ್ಸ್ ಮನ್ ಎನಿಸಿದರು. ಲಾರ್ಡ್ಸ್​ನಲ್ಲಿ 22 ರನ್ ಗಳಿಸಿದ ವೇಳೆ ಧೋನಿ ಈ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್, ಗಂಗೂಲಿ ಮತ್ತು ದ್ರಾವಿಡ್ ಭಾರತದ ಮೊದಲ ಮೂವರು ಸಾಧಕರು. ಧೋನಿ 50ರ ಸರಾಸರಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್​ಮನ್ ಆಗಿದ್ದಾರೆ.

ಜೋ ರೂಟ್ ಏಕದಿನ ಕ್ರಿಕೆಟ್​ನಲ್ಲಿ 12ನೇ ಶತಕ ಪೂರೈಸಿದರು. ಇದರೊಂದಿಗೆ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್​ಮನ್​ಗಳ ಪೈಕಿ ಮಾರ್ಕಸ್ ಟ್ರೆಸ್ಕೊತಿಕ್ (12) ಜತೆಗೆ ಜಂಟಿ ಅಗ್ರಸ್ಥಾನ ಪಡೆದರು.

ಎಂಎಸ್ ಧೋನಿ ಏಕದಿನ ಕ್ರಿಕೆಟ್​ನಲ್ಲಿ 300 ಕ್ಯಾಚ್ ಹಿಡಿದ ವಿಶ್ವದ 4ನೇ ವಿಕೆಟ್ಕೀಪರ್ ಎನಿಸಿಕೊಂಡರು. ಆಡಂ ಗಿಲ್ಕ್ರಿಸ್ಟ್ (417), ಮಾರ್ಕ್ ಬೌಷರ್ (403), ಕುಮಾರ ಸಂಗಕ್ಕರ (402) ಈ ಸಾಧನೆ ಮಾಡಿದ್ದಾರೆ.

ಗ್ಯಾಲರಿಯಲ್ಲೇ ಪ್ರೇಮ ನಿವೇದನೆ

ವಿಶ್ವ ಕ್ರಿಕೆಟ್​ನ ಕಾಶಿ ಎಂದೇ ಹೆಸರಾಗಿರುವ ಪ್ರತಿಷ್ಠಿತ ಲಾರ್ಡ್ಸ್ ಮೈದಾನದ ಕ್ರಿಕೆಟ್ ಕುರಿತಂತೆ ಹಲವು ಅವಿಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ, ಶನಿವಾರ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವೇಳೆ ಲಾರ್ಡ್ಸ್ ಮೈದಾನ ಇಬ್ಬರು ಪ್ರೇಮಿಗಳ ಪ್ರೇಮ ನಿವೇದನೆಗೂ ಸಾಕ್ಷಿಯಾಯಿತು.

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...