Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಡಿವೋರ್ಸ್ ತೀರ್ಪಿಗೆ ಮುನ್ನವೇ ಮರುವಿವಾಹ ಓಕೆ

Monday, 27.08.2018, 3:04 AM       No Comments

| ಸುಚೇತನಾ ನಾಯ್ಕ್​ ಬೆಂಗಳೂರು

ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಸಂಧಾನ ಕೇಂದ್ರದಲ್ಲಿ ದಂಪತಿ ನಡುವೆ ಒಮ್ಮತದ ಅಭಿಪ್ರಾಯ ಮೂಡಿದರೆ ಆಕೆ/ಆತ ಎರಡನೇ ವಿವಾಹವಾಗಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇಂಥ ವಿವಾಹಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿರುವ ನ್ಯಾಯಮೂರ್ತಿ ನಾಗೇಶ್ವರ ರಾವ್ ನೇತೃತ್ವದ ಪೀಠ, ಇದಕ್ಕೆ ವಿರುದ್ಧವಾಗಿ ಕೌಟುಂಬಿಕ ಕೋರ್ಟ್ ಹಾಗೂ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ. ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ಎರಡನೇ ವಿವಾಹವಾಗಿ, ಕಳೆದ ಏಳು ವರ್ಷಗಳಿಂದ ಕಾನೂನು ಸುಳಿಗೆ ಸಿಲುಕಿದ್ದ ವ್ಯಕ್ತಿಗೆ ಕೋರ್ಟ್ ನಿರಾಳತೆ ನೀಡಿದೆ. ಆತನ ವಿರುದ್ಧ ಮೊದಲ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಏನಿದು ಪ್ರಕರಣ?: ಪತಿ ಅನುರಾಗ್​ರಿಂದ ವಿಚ್ಛೇದನ ಕೋರಿ ಪತ್ನಿ ರಚನಾ 2009ರಲ್ಲಿ ದೆಹಲಿಯ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು. ರಚನಾ ಜೊತೆ ಬಾಳಲು ತಾವು ಸಿದ್ಧವಿರುವುದಾಗಿ ಅನುರಾಗ್ ಇನ್ನೊಂದು ಅರ್ಜಿ ಸಲ್ಲಿಸಿದ್ದರು. ರಚನಾರ ಅರ್ಜಿಯನ್ನು ಮಾನ್ಯ ಮಾಡಿದ್ದ ಕೋರ್ಟ್, ಅನುರಾಗ್ ಅರ್ಜಿಯನ್ನು ವಜಾ ಮಾಡಿತ್ತು.

ಇದನ್ನು ಪ್ರಶ್ನಿಸಿ ಅನುರಾಗ್ ಹೈಕೋರ್ಟ್​ಗೆ ಹೋಗಿದ್ದರು. ಈ ಅರ್ಜಿ ಇತ್ಯರ್ಥ ಬಾಕಿ ಇರುವಾಗಲೇ ಸಂಧಾನ ಕೇಂದ್ರದಲ್ಲಿ (ಮೀಡಿಯೇಷನ್ ಸೆಂಟರ್) ವಿಚ್ಛೇದನದ ಕುರಿತು ದಂಪತಿ ಒಪ್ಪಂದಕ್ಕೆ ಬಂದರು. ರಚನಾ ಜತೆ ಬಾಳಲು ಸಿದ್ಧ ಎಂದು ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ಅನುರಾಗ್ ಹೇಳಿದ್ದರು. ಅದನ್ನು ರಚನಾ ಒಪ್ಪಿಕೊಂಡಿದ್ದರು. ಕಾನೂನು ಪ್ರಕಾರ 30 ದಿನಗಳ ಒಳಗಾಗಿ ಈ ಕುರಿತು ಅನುರಾಗ್ ಹೈಕೋರ್ಟ್​ಗೆ ಲಿಖಿತ ಮಾಹಿತಿ ನೀಡಿದರು.

ಈ ಮಾಹಿತಿ ಪುರಸ್ಕರಿಸಿ 2011ರ ಡಿಸೆಂಬರ್ 20ರಂದು ಹೈಕೋರ್ಟ್ ಅಂತಿಮ ತೀರ್ಪು ನೀಡಿತು. ಆದರೆ ತೀರ್ಪು ಬರುವ ಒಂದು ವಾರ ಮೊದಲು (ಡಿಸೆಂಬರ್ 6ರಂದು) ಅನುರಾಗ್ ಎರಡನೆಯ ವಿವಾಹವಾಗಿದ್ದರು. ಇದನ್ನು ರಚನಾ ಕೌಟುಂಬಿಕ ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಅಂತಿಮ ತೀರ್ಪು ಬರುವ ಮುನ್ನ ಮರುವಿವಾಹವಾಗಿದ್ದು ಸರಿಯಲ್ಲ ಎಂದಿದ್ದ ಕೋರ್ಟ್, ಎರಡನೆಯ ವಿವಾಹವನ್ನು ರದ್ದುಮಾಡಿತ್ತು. ಹೈಕೋರ್ಟ್ ಕೂಡ ಈ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದಿತ್ತು. ಅಂತಿಮವಾಗಿ ಅನುರಾಗ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ನ್ಯಾಯಪೀಠ ಹೇಳಿದ್ದೇನು…

ಕೌಟುಂಬಿಕ ಕೋರ್ಟ್​ಗಳು ನೀಡಿರುವ ಆದೇಶ ಪ್ರಶ್ನಿಸಿ ಪತಿ ಅಥವಾ ಪತ್ನಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯ ತೀರ್ಪು ಬಾಕಿಯಿದ್ದರೂ, ದಂಪತಿ ನಡುವೆ ಸಂಧಾನ ಕೇಂದ್ರದಲ್ಲಿ ಒಪ್ಪಂದ ಏರ್ಪಟ್ಟರೆ, ಈ ಕುರಿತು ಹೈಕೋರ್ಟ್​ಗೆ ಲಿಖಿತ ಮಾಹಿತಿ ನೀಡಿದರೆ ಸಾಕು. ಕೇಸಿನ ಅಂತಿಮ ತೀರ್ಪು ಬರುವವರೆಗೆ ಕಾಯಬೇಕಿಲ್ಲ. ಮರುಮದುವೆಯಾಗುವ ಅಧಿಕಾರ ಪತಿ ಅಥವಾ ಪತ್ನಿಗೆ ಇದೆ.

Leave a Reply

Your email address will not be published. Required fields are marked *

Back To Top