ಸಮುದ್ರ ಸುರಂಗಮಾರ್ಗ ಮೀನುಗಳ ಪ್ರದರ್ಶನ

blank

ಬೆಳಗಾವಿ: ನಗರದ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಸಮುದ್ರ ಸುರಂಗಮಾರ್ಗ ಮೀನುಗಳ ಪ್ರದರ್ಶನ ಆಯೋಜಿಸಲಾಗಿದ್ದು, 500ಕ್ಕೂ ಹೆಚ್ಚು ಜಾತಿಯ ಮೀನುಗಳನ್ನು ಹೊಂದಿರುವ ಅತಿದೊಡ್ಡ ಅಂತರ್ಜಲ ಸುರಂಗದ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ. ಈ ಪ್ರದರ್ಶನವು ಸಂಜೆ 4ರಿಂದ ರಾತ್ರಿ 9ರ ವರೆಗೆ ನಡೆಯುತ್ತಿದೆ. ಇದು 24 ಕೋಣೆಗಳೊಂದಿಗೆ ಅತಿದೊಡ್ಡ ಅಂತರ್ಜಲ ಅಕ್ವೇರಿಯಂ ಆಗಿದೆ. ಇದರಲ್ಲಿ ಒಂಬತ್ತು ಮಧ್ಯಮ ಗಾತ್ರದ, ಹದಿಮೂರು ಸಣ್ಣ ಗುಹೆಗಳು ಮತ್ತು ಎರಡು ದೊಡ್ಡ ಗುಹೆಗಳನ್ನು ಒಳಗೊಂಡಿದ್ದು, ಸಿಹಿ ನೀರು ಮತ್ತು ಸಮುದ್ರ ಮೀನುಗಳನ್ನು ಹೊಂದಿರುತ್ತವೆ. ಎಲ್ಲವನ್ನೂ ವಿಶಿಷ್ಟವಾದ ತೊಟ್ಟಿಗಳಲ್ಲಿ ಇರಿಸಲಾಗುತ್ತಿದೆ. ಪ್ರತಿಯೊಂದು ಸ್ವಂತ ಪರಿಸರ ವಿಜ್ಞಾನ ಹೊಂದಿವೆ.

blank

ವಿಶೇಷ ಪ್ರಭೇದ ಮೀನುಗಳ ಪ್ರದರ್ಶನ ವೀಕ್ಷಿಸಲು ಜನರು ಮುಗಿಬೀಳುತ್ತಿದ್ದಾರೆ. 20 ಸಾವಿರ ಚದರಡಿಗೂ ಅಧಿಕ ವಿಸ್ತೀರ್ಣದಲ್ಲಿ ಅಂತರ್ಜಲ ಸುರಂಗದ ಸಿಹಿ ನೀರು ಮತ್ತು ಉಪ್ಪುನೀರು ಎರಡರಲ್ಲಿಯೂ ವಿಶೇಷ ಪ್ರಭೇದದ ಮೀನುಗಳನ್ನು ನೋಡಬಹುದು. ರಾಷ್ಟ್ರೀಯ ಗ್ರಾಹಕರ ಮೇಳದ ಬೆಂಬಲದ ಅಡಿಯಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ. ವಿಶೇಷ ಮೀನುಗಳಾದ ಏಂಜೆಲ್ಫಿಶ್, ಕೋಯಿ, ಸ್ಕಾರ್ಪಿಯನ್ಫಿಶ್, ಕ್ಲೌನ್ಫಿಶ್, ಸಮುದ್ರ ಕುದುರೆಗಳು, ಬಾಕ್ಸಿ ್ಫಶ್, ಕೌಫಿಶ್, ಈಲ್ಸ್, ವ್ರಾಸ್ಗಳು, ಮಹ್ಸೀರ್ ಮತ್ತು ಸಾಮಾನ್ಯ ಸಮುದ್ರ ಜೀವಿಗಳನ್ನು ನೋಡಬಹುದು. ಸಾಗರ ಜೀವಿಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ಸಹ ಪ್ರದರ್ಶನದಲ್ಲಿ ವಿಶೇಷವಾಗಿ ತೋರಿಸಲಾಗುತ್ತದೆ.

ಭೂಮಿಯ ಜಲಚರಗಳ ಪ್ರಾಮುಖ್ಯತೆಗೆ ಒತ್ತು ನೀಡುತ್ತದೆ. ಇವು ಮಾನವನ ಆರ್ಥಿಕತೆ ಮತ್ತು ಆರೋಗ್ಯಕ್ಕೆ ಎಷ್ಟು ಅವಶ್ಯಕವಾಗಿದೆ ಎಂಬುದನ್ನು ಸಹ ತಿಳಿಸಿಕೊಡುತ್ತವೆ.

Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank