16 C
Bangalore
Saturday, December 7, 2019

ಮೀನುಗಾರಿಕೆ ಬೋಟ್ ಪತ್ತೆಗೆ ಎಐಎಸ್ ಟ್ರಾನ್ಸ್‌ಪಾಂಡರ್

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

«ಉಡುಪಿ, ಮಂಗಳೂರು ಬಂದರಿನಲ್ಲಿ ತ್ವರಿತಗತಿಯಲ್ಲಿ ಅಳವಡಿಕೆ * ಮೀನುಗಾರರ ರಕ್ಷಣೆಗೆ ಸುಲಭ ಸಾಧನ»

– ಭರತ್‌ರಾಜ್ ಸೊರಕೆ ಮಂಗಳೂರು
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟುಗಳು ಬಿರುಗಾಳಿಗೆ ಸಿಲುಕಿದರೆ ದಿಕ್ಕುತಪ್ಪುವ ಸಾಧ್ಯತೆಗಳು ಹೆಚ್ಚು. ಇಂಥ ಸಂದರ್ಭದಲ್ಲಿ ಜಿಪಿಎಸ್ ಸಂಪರ್ಕ ಇದ್ದರೂ ಕೋಸ್ಟ್‌ಗಾರ್ಡ್‌ಗೆ ನಿಖರ ಮಾಹಿತಿ ಸಿಗದೆ ಮೀನುಗಾರರ ರಕ್ಷಣೆ ಕಷ್ಟವಾಗುತ್ತದೆ. ಹೀಗಾಗಿ ಬೋಟ್‌ಗಳ ಪತ್ತೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಎಐಎಸ್ ಟ್ರಾನ್ಸ್‌ಪಾಂಡರ್ (ಅಟೋಮೆಟಿಕ್ ಐಡೆಂಟಿಫಿಕೇಶನ್ ಸಿಸ್ಟಂ) ಅಳವಡಿಕೆ ಕಡ್ಡಾಯ ಮಾಡಿದೆ.
ಎಐಎಸ್ ಟ್ರಾನ್ಸ್‌ಪಾಂಡರ್ ಎನ್ನುವುದು ಸ್ವಯಂಚಾಲಿತ ಗುರುತಿಸುವಿಕೆ ವ್ಯವಸ್ಥೆ. ಈ ತಂತ್ರಜ್ಞಾನ ಅಳವಡಿಸುವಂತೆ ಮೀನುಗಾರಿಕಾ ಇಲಾಖೆ, ಮೀನುಗಾರರ ಸಂಘಟನೆ ನಿರಂತರ ಜಾಗೃತಿ ಮೂಡಿಸಿದ ಪರಿಣಾಮ ಮಂಗಳೂರು ಮತ್ತು ಮಲ್ಪೆ ಬಂದರಿನಲ್ಲಿ ಮೀನುಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಉಭಯ ಜಿಲ್ಲೆಗಳಲ್ಲಿ 100ಕ್ಕೂ ಅಧಿಕ ಬೋಟ್‌ಗಳಲ್ಲಿ ಎಐಎಸ್ ಟ್ರಾನ್ಸ್‌ಪಾಂಡರ್ ಅಳವಡಿಸಲಾಗಿದೆ.
ಈ ಹಿಂದೆ ಮೀನುಗಾರರಿಗೆ ಸಮುದ್ರ ಮಧ್ಯೆ ಯಾವುದೇ ಅಪಾಯ ಎದುರಾದಾಗ ರಕ್ಷಣೆಗಾಗಿ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಆದರೆ ಎಐಎಸ್ ಟ್ರಾನ್ಸ್‌ಪಾಂಡರ್‌ನಲ್ಲಿ ಸಮುದ್ರದ ಮಧ್ಯೆ ಸಂಪರ್ಕ ಸುಲಭ. ಇತರ ಬೋಟುಗಳನ್ನು ಟ್ರಾೃಕ್ ಮಾಡಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದಲೂ ಈ ತಂತ್ರಜ್ಞಾನ ಅಳವಡಿಕೆ ಮುಖ್ಯವಾಗಿದೆ.
ಎರಡು ತಿಂಗಳ ಅವಧಿಯೊಳಗೆ ತಂತ್ರಜ್ಞಾನ ಕಡ್ಡಾಯವಾಗಿ ಅಳವಡಿಸಿಕೊಂಡರೆ ಮಾತ್ರ ಸಬ್ಸಿಡಿ ಆಧಾರದಲ್ಲಿ ಡಿಸೇಲ್ ನೀಡಿ ಎನ್ನುವ ಸಲಹೆಯನ್ನು ಕೇಂದ್ರ ಸರ್ಕಾರ ಸೂಚನೆ ನೀಡಿದೆ. 20 ಮೀಟರ್‌ಗಿಂತ ಹೆಚ್ಚು ಉದ್ದದ ಬೋಟ್‌ಗಳಿಗೆ ಮಾತ್ರ ತಂತ್ರಜ್ಞಾನ ಕಡ್ಡಾಯವಾಗಿದ್ದು, ಮಂಗಳೂರಿನಲ್ಲಿ ಈ ಗಾತ್ರದ 270 ಬೋಟ್‌ಗಳಿವೆ.
‘ಕಳೆದ ಎರಡು ತಿಂಗಳಲ್ಲಿ ಮಂಗಳೂರು ಮತ್ತು ಮಲ್ಪೆ ಬಂದರಿನಿಂದ ಎಐಎಸ್ ಟ್ರಾನ್ಸ್‌ಪಾಂಡರ್ ಅಳವಡಿಸುವಂತೆ ಬೇಡಿಕೆ ಹೆಚ್ಚಿದೆ’ ಎನ್ನುತ್ತಾರೆ ಮಂಗಳೂರಿನ ವೆಸ್ಟರ್ನ್ ಕಮ್ಯೂನಿಕೇಷನ್ ಮಾಲೀಕ ಲೋಹಿತಾಕ್ಷ ಪುತ್ರನ್.

ಉಪಗ್ರಹ ನೇರ ಸಂಪರ್ಕ:  ಎಐಎಸ್ ಟ್ರಾನ್ಸ್‌ಪಾಂಡರ್ ತಂತ್ರಜ್ಞಾನ ನೇರ ಉಪಗ್ರಹ ಸಂಪರ್ಕದಲ್ಲಿರುತ್ತದೆ. ಬೋಟ್ ಸಂಚರಿಸುವ ದಾರಿ ಮತ್ತು ದಿಕ್ಕುಗಳನ್ನು ಈ ವ್ಯವಸ್ಥೆಯಲ್ಲಿ ನಿಖರವಾಗಿ ಪತ್ತೆ ಸಾಧ್ಯವಿದೆ. ಆಸುಪಾಸಿನಲ್ಲಿರುವ ಇತರ ಬೋಟ್, ಹಡಗು ಬಗ್ಗೆಯೂ ಮಾಹಿತಿ ಪಡೆಯಬಹುದು. ಯಾವ ದೇಶದ ಹಡಗು ಎನ್ನುವ ಬಗ್ಗೆಯೂ ತಿಳಿಯಬಹುದು. ಬೋಟ್‌ಗಳು ಯಾವುದೇ ಅಪಾಯ ಎದುರಿಸಿದಾಗ ತಕ್ಷಣ ಸಂದೇಶ ರವಾನಿಸಬಹುದು. ಇದು ಹತ್ತಿರದ ಇತರ ಟ್ರಾನ್ಸ್‌ಫಾಂಡರ್‌ಗಳಿಗೆ ರವಾನೆಯಾಗಿ ರಕ್ಷಣೆ ಮಾಡಲು ಸುಲಭ. ಕರಾವಳಿ ರಕ್ಷಣಾ ಪಡೆ ಮತ್ತು ಗುಪ್ತಚಾರ ವಿಭಾಗಕ್ಕೂ ಸಂಪರ್ಕವಿರುವುದರಿಂದ ಅಪಾಯದ ಸಂದರ್ಭ ಸ್ಪಂದನೆ, ಬೋಟ್ ಅಪಹರಣವಾದರೆ ಪತ್ತೆ ಸಾಧ್ಯವಾಗುತ್ತದೆ.

ಸರ್ಕಾರಿ ನೋಂದಣಿ: ಎಲ್ಲ ಟ್ರಾನ್ಸ್‌ಪಾಂಡರ್‌ಗಳಿಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಎಂಎಂಎಸ್‌ಐ ನಂಬರ್ ಹಾಗೂ ಕಾಲ್‌ಸೈನ್ ನಂಬರ್‌ಗಳನ್ನು ನೀಡಲಾಗುತ್ತದೆ. ‘ಫೈಂಡ್‌ಷಿಪ್’ ಎನ್ನುವ ಆ್ಯಪ್‌ನ್ನು ಈ ತಂತ್ರಜ್ಞಾನಕ್ಕೆ ಜೋಡಿಸಲಾಗಿದ್ದು ಎಂಎಂಎಸ್‌ಐ ಸಂಖ್ಯೆಯನ್ನು ಆ್ಯಪ್‌ನಲ್ಲಿ ನಮೂದಿಸುವ ಮೂಲಕ ಬೋಟ್ ಇರುವ ಜಾಗವನ್ನು ಸಾರ್ವಜನಿಕರಿಗೂ ತಿಳಿಯಬಹುದು. ಈಗಾಗಲೇ ಉಭಯ ಜಿಲ್ಲೆಗಳಲ್ಲಿ 35 ಬೋಟ್‌ಗಳು ಎಂಎಂಎಸ್‌ಐ ಸಂಖ್ಯೆ ಪಡೆದುಕೊಂಡಿವೆ.

ಎಐಎಸ್ ಟ್ರಾನ್ಸ್‌ಪಾಂಡರ್ ಅಳವಡಿಸಲು ಸಾಮಾನ್ಯ ವರ್ಗಕ್ಕೆ ಶೇ.40, ಮಹಿಳೆ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಶೇ.60 ಸಬ್ಸಿಡಿ ಲಭ್ಯವಿದೆ. 20 ಮೀಟರ್‌ಗಿಂತ ಉದ್ದವಿರುವ ಬೋಟ್‌ಗಳಿಗೆ ಕಡ್ಡಾಯವಾಗಿ ತಂತ್ರಜ್ಞಾನ ಅಳವಡಿಸಬೇಕು. ಇದರಿಂದ ಮೀನುಗಾರರಿಗೆ ಹೆಚ್ಚಿನ ಪ್ರಯೋಜನವಿದ್ದು, ರಕ್ಷಣೆಗೆ ಸಹಾಯವಾಗುತ್ತದೆ.
– ಚಿಕ್ಕವೀರ ನಾಯ್ಕ, ಮಂಗಳೂರು ಮೀನುಗಾರಿಕಾ ಇಲಾಖೆಉಪನಿರ್ದೇಶಕ

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...