ಉಪನ್ಯಾಸಕರಿಗೆ ಗುಂಡಿಟ್ಟು ಕೊಂದ ದ್ವಿತೀಯ ಬಿಎ ವಿದ್ಯಾರ್ಥಿ

ಸೋನೆಪತ್‌: ದ್ವಿತೀಯ ಬಿಎ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸರ್ಕಾರಿ ಕಾಲೇಜಿನ ಇಂಗ್ಲೀಷ್‌ ಉಪನ್ಯಾಸಕರನ್ನು ಆತನ ಮಗಳ ಮುಂದೆಯೇ ಗುಂಡಿಕ್ಕಿ ಕೊಂದಿರುವ ಘಟನೆ ಹರ್ಯಾಣದ ಸೋನೇಪತ್‌ನಲ್ಲಿ ನಡೆದಿದೆ.

ಮೃತ ರಾಜೇಶ್‌ ಮಲಿಕ್‌(40) ಮತ್ತು 14 ವರ್ಷದ ಪುತ್ರಿ(14) ಪೀಪ್ಲಿ ಹಳ್ಳಿಯ ಶಾಹೀದ್‌ ದಲ್ಬೀರ್‌ ಸಿಂಗ್‌ ಕಾಲೇಜಿಗೆ ಬಂದ ವೇಳೆ ಅಲ್ಲಿಯೇ ಇದ್ದ ಆರೋಪಿ ಜಗ್ಮಲ್‌ ಸಿಂಗ್‌ ಏಕಾಏಕಿ ಅವರ ಮೇಲೆ ಫೈರಿಂಗ್‌ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ನಾಲ್ಕು ಬಾರಿ ಗುಂಡೇಟು ತಿಂದ ಮಲಿಕ್‌ರನ್ನು ಕಾಲೇಜು ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು.

ಕಳೆದ ಕೆಲ ದಿನಗಳ ಹಿಂದೆ ತರಗತಿಯಲ್ಲಿ ಹುಡುಗಿಗೆ ಕಿರುಕುಳ ನೀಡಿದ್ದಕ್ಕಾಗಿ ಆರೋಪಿ ಸಿಂಗ್‌ಗೆ ಉಪನ್ಯಾಸಕರು ಬೈದಿದ್ದ ಹಿನ್ನೆಲೆಯಲ್ಲಿ ಆರೋಪಿ ಉಪನ್ಯಾಸಕರ ಮೇಲೆ ಗುಂಡಿನ ಮಳೆಗರೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್‌ ವಿರುದ್ಧ ಕೊಲೆ ಮತ್ತು ಕ್ರಿಮಿನಲ್‌ ಪಿತೂರಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ತನ್ನ ಚಿಕ್ಕಪ್ಪನ ಲೈಸೆನ್ಸ್ ಹೊಂದಿರುವ ಪಿಸ್ತೂಲ್‌ನ್ನು ಬಳಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *