ಅಥಣಿ ಗ್ರಾಮೀಣ: ಕೊಕಟನೂರ ಗ್ರಾಮದ ಪ್ರಥಮ ದರ್ಜೆ ಮಹಾವಿದ್ಯಾಲಯ ವೈಜ್ಞಾನಿಕ ಮನೋಧರ್ಮ ಮತ್ತು ವೃತ್ತಿಪರ ನೈತಿಕತೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಹಳೆಯ ವಿದ್ಯಾರ್ಥಿನಿ ಡಾ.ಮಂಜು ಸನದಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಈ ಕಾಲೇಜಿನ ಉಪನ್ಯಾಸಕರು ಸ್ಪರ್ಧಾತ್ಮಕ ಪ್ರಪಂಚದ ಸವಾಲು ಎದುರಿಸಲು ಪ್ರಶಿಕ್ಷಣಾರ್ಥಿಗಳನ್ನು ಸಕ್ರಿಯಗೊಳಿಸಲು ಅತ್ಯತ್ತಮ ಕಲಿಕಾ ಸೌಲಭ್ಯ ನೀಡುತ್ತಿದ್ದಾರೆ. ಪಠ್ಯಕ್ರಮ ಮತ್ತು ಸಹಪಠ್ಯ ಚಟುವಟಿಕೆ ನೀಡುವ ಮೂಲಕ ತಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವದು ಶ್ಲಾಘನಿಯ ಎಂದರು.
ಐಕ್ಯೂಎಸಿ ಸಂಚಾಲಕ ಪ್ರೊ. ಡಾ. ಸತೀಶ ಮೋಹಿತೆ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿ ತಮ್ಮ ಕ್ಷೇತ್ರಗಳಲ್ಲಿ ಕಲಿಕೆ ಮತ್ತು ಬೆಳವಣಿಗೆ ಮುಂದುವರಿಸಲು ಪ್ರೋತ್ಸಾಹಿಸಿದರು. ಬಳಿಕ ಹಳೆಯ ವಿದ್ಯಾರ್ಥಿಗಳ ಸಂಘ ನೊಂದಾಯಿಸಲು ನಿರ್ಣಯಿಸಲಾಯಿತು.
ಪ್ರಾಚಾರ್ಯ ಸಿದ್ದರಾಮ ಯರನಾಳ ಅಧ್ಯಕ್ಷತೆ ವಹಿಸಿದ್ದರು.
ಹಳೆಯ ವಿದ್ಯಾರ್ಥಿಗಳ ಸಂಚಾಲಕ ಪರಪ್ಪ ಮಗದುಮ್ಮ, ಕುಮಾರ ತಕತರಾವ, ಶ್ರೀಕಾಂತ ಜಾಧವ, ಮಲ್ಲಿಕಾರ್ಜುನ ನೇಸರಗಿ, ಸುನಿಲ ಪೋಳ, ಆಕಾಶ ಕಾಂಬಳೆ, ಉಮೇಶ ಭಜಂತ್ರಿ, ಪ್ರಕಾಶ ಹೆರ್ಗೆ ಇತರರು ಇದ್ದರು.