20.4 C
Bangalore
Monday, December 9, 2019

ಗೊಂಬೆಯಾಟದಲ್ಲಿ ವಿಜ್ಞಾನ ಬೋಧನೆ ಪರಿಣಾಮಕಾರಿ

Latest News

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ಪಠ್ಯಕ್ರಮ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಗೊಂಬೆಯಾಟದ ಮೂಲಕ ವಿಜ್ಞಾನ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲುಳಿಯಬಲ್ಲದು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಮಾರೇಶ್ವರ ಬಿ.ಇಡಿ. ಕಾಲೇಜ್​ನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸೇವಕ ಸ್ವಯಂಸೇವಾ ಸಂಸ್ಥೆ ಬೆಳಗಾವಿ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ ಸಾಂಪ್ರದಾಯಿಕ ಗೊಂಬೆಯಾಟದ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ನೂತನ ಪ್ರಯೋಗಗಳ ಮೂಲಕ ಶಿಕ್ಷಣದ ಪರಿಪೂರ್ಣತೆ ಸಾಧ್ಯವಿದೆ. ಈಗ ಬದಲಾದ ಕಾಲಘಟ್ಟದಲ್ಲಿ ಅಂಕಾಧಾರಿತ ಸಿದ್ಧಾಂತ, ಪ್ರಾಯೋಗಿಕವಾಗಿ ಬದಲಾಗಬೇಕಾದ ಅನಿವಾರ್ಯತೆಯಿದೆ. ಮುಂದಿನ ಪೀಳಿಗೆಗೆ ಕೌಶಲ ಆಧಾರಿತ ಶಿಕ್ಷಣ ನೀಡಬೇಕಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಹಲವು ಪ್ರಯತ್ನ ಕೈಗೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದ ಸಂಘಟಕ ಸೇವಕ ಸಂಸ್ಥೆಯ ಕಾರ್ಯದರ್ಶಿ ಆನಂದ ಲೋಬೊ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ಮಾಡಿದಾಗ ಪಠ್ಯದ ವಿಷಯಗಳು ಅರ್ಥವಾಗದಿರುವುದು ಕಾರಣ ಎಂಬ ಹಿನ್ನೆಲೆಯಲ್ಲಿ ಗೊಂಬೆಯಾಟದ ಮೂಲಕ ಪಾಠವನ್ನು ಅರ್ಥೈಸುವ ಕ್ರಮ ಜರುಗಿಸಲಾಗುತ್ತಿದೆ ಎಂದರು.

ವೀರಗಾಸೆ, ಗೊಂಬೆಯಾಟ, ಗೀಗೀ ಪದದ ಮೂಲಕ ಜನಸಾಮಾನ್ಯರಿಗೂ ಸಂವಹನ ಸಾಧ್ಯತೆಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ನಮ್ಮ ಸಂಸ್ಥೆ ಬಡತನ ನಿಮೂಲನೆ, ಶಿಕ್ಷಣ ಹಕ್ಕು, ಸಂಘಟನೆ, ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯ ವಿವಾಹ ತಡೆ, ದೇವದಾಸಿಯರ ಮಕ್ಕಳ ಶಿಕ್ಷಣ-ಸಬಲೀಕರಣ ಇಂಥ ಕಾರ್ಯಕ್ರಮ ಕೈಗೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಇಡಿ. ಕಾಲೇಜ್ ಪ್ರಾಚಾರ್ಯ ಡಾ.ಎನ್. ಸದಾಶಿವಪ್ಪ ಮಾತನಾಡಿ, ಸರ್ಕಾರ ಸ್ಥಳೀಯ- ಸಂಸ್ಥೆಯೊಂದಿಗೆ ಶಿಗ್ಗಾಂವಿಯ ಗೊಟಗೊಡಿಯಲ್ಲಿ ಶಿಲ್ಪಕಲೆ, ಚಿತ್ರಕಲೆಯ 5 ವರ್ಷಗಳ ತರಬೇತಿ ಆರಂಭಿಸಿದೆ. ಇಲ್ಲಿನ ಕಲಾವಿದರಿಗೆ ದೇಶಾದ್ಯಂತ ಉದ್ಯೋಗ ಭರವಸೆ ನೀಡಲಾಗಿದೆ. ದೇಶದಲ್ಲಿ ಪ್ರಸ್ತುತ ವರ್ಷವೇ 1.86 ಕೋಟಿ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಇಂಥದೇ ಉದ್ಯೋಗ ಮಾಡಬೇಕೆಂಬ ಅವಕಾಶಕ್ಕೆ ಕಾಯಬಾರದು. ಸ್ವಾವಲಂಬಿ ಕ್ಷೇತ್ರದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಾಗಾರದ ಮೊದಲ ದಿನ ಉತ್ತರ ಕನ್ನಡ ಜಿಲ್ಲೆಯ ಗೊಂಬೆಯಾಟ ತಂಡದಿಂದ ಗೊಂಬೆಯಾಟ ಪ್ರದರ್ಶನಗೊಂಡಿತು. ತರಬೇತಿ ಕಾರ್ಯಾಗಾರದಲ್ಲಿ 90 ಜನ ವಿಜ್ಞಾನ ಪದವೀಧರರು, ಉಪನ್ಯಾಸಕರು, ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿರ್ದೇಶಕ ಗುರುಸಿದ್ದಪ್ಪ ಕೊಂಡೋಜಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ಉಪನ್ಯಾಸಕ ರಾಘವೇಂದ್ರ ಮಾಡಳ್ಳಿ ಸ್ವಾಗತಿಸಿದರು. ವಿಶ್ವನಾಥ ಬೊಂದಾಡೆ ವಂದಿಸಿದರು. ಗೊಂಬೆಯಾಟದ ತಜ್ಞ, ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಬಿರಾದಾರ, ರಂಗಾಯಣ ಹಾಗೂ ನೀನಾಸಂ ನಿರ್ದೇಶಕರಾದ ಗಣೇಶ ಹೆಗ್ಗೋಡು, ಸುನಂದಾ ನಿಂಬನಗೌಡರ ಉಪಸ್ಥಿತರಿದ್ದರು.

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...