ಮುಧೋಳ: ಲೋಕ ಶಿಕ್ಷಣದ ಸಂದೇಶವನ್ನು ಸಮಾಜಕ್ಕೆ ರವಾನಿಸುವ ಪ್ರಭಾವಿ ಮಾಧ್ಯಮವಾಗಿ ನಾಟಕ ಕಲೆ ಮಹತ್ವ ಪಡೆದುಕೊಂಡಿದೆ ಎಂದು ಬಿಇಓ ಸಮೀರ ಮುಲ್ಲಾ ಹೇಳಿದರು.
ನಗರದ ಆರ್.ಎಂ.ಜಿ. ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ವಿಜ್ಞಾನ, ವಿಚಾರಗೋಷ್ಠಿ, ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ನೂರು ಪುಸ್ತಕಗಳ ಸಾರವನ್ನು ಪ್ರೇಕ್ಷಕರ ಮಸ್ತಕದಲ್ಲಿ ಮನದಟ್ಟು ಮಾಡುವ ಅದ್ಭುತ ಶಕ್ತಿ ನಾಟಕ ಕಲೆಯಲ್ಲಿ ಅಡಗಿದೆ. ಕಲೆ ಮತ್ತು ವಿಜ್ಞಾನದ ನಡುವೆ ನಿಕಟವಾದ ಸಂಬಂಧವಿದ್ದು ಆಯೋಜಿಸಿರುವ ವಿಜ್ಞಾನ ನಾಟಕ ಸ್ಪರ್ಧೆ ವಿದ್ಯಾರ್ಥಿಗಳಿಗೆ ಜ್ಞಾನದ ಪ್ರಭೆಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದರು.
ಯಾದವಾಡದ ಜಿಎನ್‌ಎಸ್ ಶಾಲೆಯ ವಿಜ್ಞಾನ ಶಿಕ್ಷಕ ಎಸ್.ಎಸ್. ಬಳೂರಗಿ ಮಾತನಾಡಿ, ಸಾಧನೆ ಕೇವಲ ನಿಂತ ನೀರಾಗದೆ ಹರಿವ ತೊರೆಯಾಗಬೇಕು. ಕಲಿಕೆ ಕೇವಲ ಅಂಕ ಗಳಿಕೆಗೆ ಸೀಮಿತಗೊಳ್ಳದೆ ಜ್ಞಾನವನ್ನು ವದ್ಧಿಸಿಕೊಳ್ಳುವ ಪರಿಪೂರ್ಣ ಸಾಧನವಾಗಬೇಕು ಎಂದು ಹೇಳಿದರು.
ಬಿಆರ್‌ಪಿ ನೂಡೆಲ್ ವೈ.ಎಂ. ಪಮ್ಮಾರ ಮಾತನಾಡಿ, ತಾಲೂಕು ಮಟ್ಟದ ವಿಜ್ಞಾನ ನಾಟಕ ಹಾಗೂ ವಿವಿಧ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಎಲ್ಲರ ಸಹಕಾರ ಮುಖ್ಯವಾಗಿದ್ದು ವಿವಿಧ ಶಾಲೆಗಳ ಹಲವಾರು ತಂಡಗಳು ಪಾಲ್ಗೊಂಡಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಉಪ ಪ್ರಾಚಾರ್ಯ ಪಿ.ಎಸ್. ಹಿರೇಮಠ, ವೈ.ಎಂ. ಪಮ್ಮಾರ, ಎಸ್.ಎಸ್. ಬಳೂರಗಿ, ಎಸ್.ಕೆ. ಬೆಣಕಟ್ಟಿ, ಮುಖ್ಯಶಿಕ್ಷಕ ವೆಂಕಟೇಶ ಗುಡೆಪ್ಪನವರ, ಜಿ.ಎಚ್. ಹಂಚನಾಳ, ಆರ್.ಎಚ್. ಕಂಬಾರ, ರೇಷ್ಮಾ ಕಲಹಾಳ ಇದ್ದರು.
ವಿಜ್ಞಾನ ನಾಟಕ ಸ್ಪರ್ಧೆ : ಲೋಕಾಪುರದ ಹೇಮ-ವೇಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಪ್ರಥಮ. ಮೆಟಗುಡ್ಡದ ಶ್ರೀ ಹೇಮ-ವೇಮ ಪ್ರೌಢ ಶಾಲೆ ದ್ವಿತೀಯ, ಮುಧೋಳದ ಶ್ರೀ ಸಂಗಮನಾಥ ಪ್ರೌಢ ಶಾಲೆ ತತೀಯ ಬಹುಮಾನ ಪಡೆದುಕೊಂಡರು.
ವಿಜ್ಞಾನ ವಿಚಾರ ಗೋಷ್ಠಿ: ಯಡಹಳ್ಳಿಯ ಕೆಪಿಎಸ್ ಸುಚಿತ್ರಾ ಕೋಟಗಿ (ಪ್ರಥಮ), ಮಿರ್ಜಿ ಸರ್ಕಾರಿ ಪ್ರೌಢ ಶಾಲೆಯ ಸಮರ್ಥ ಕುರಬೇಟ್ಟ (ತತೀಯ), ಮಹಾಲಿಂಗಪುರದ ಸರ್ಕಾರಿ ಪ್ರೌಢ ಶಾಲೆಯ ಸಾಕ್ಷಿ ಗಡ್ಡೆಪ್ಪನವರ (ತತೀಯ ಸ್ಥಾನ )ಪಡೆದುಕೊಂಡಿದ್ದಾರೆ.