ಚಿತ್ರದುರ್ಗ: ನಮ್ಮ ನಡುವಿರುವ ನಾನಾ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆಗಳ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿಪ್ಪೇಸ್ವಾಮಿ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಏರ್ಪಡಿಸಿದ್ದ 30ನೇ ಜಿಲ್ಲಾಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಾತನಾಡಿ,ವಿಜ್ಞಾನ,ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದ ರೂ ಅನೇಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಸಂಶೋಧನೆಗಳ ಮೂಲಕ ಇವುಗಳಿಗೆ ಪರಿಹಾರಗಳನ್ನು ಕಂಡು ಕೊಳ್ಳಬೇಕಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‌ಕುಮಾರ್ ಮಾತನಾಡಿ,ವೈಜ್ಞಾನಿಕ ಮನೋಭಾವನೆ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ರಾಜ್ಯವಿಜ್ಞಾನ ಪರಿಷತ್ ಖಜಾಂಚಿ ಎಚ್‌ಎಸ್‌ಟಿ ಸ್ವಾಮಿ ಮಾತನಾಡಿ,ಜ.16 ರಿಂದ 3 ದಿನಗಳ ಕಾಲ ಕಲಬುರಗಿಯಲ್ಲಿ ರಾಜ್ಯ ಹಾಗೂ 27ರಿಂದ 3 ದಿನಗಳ ಕಾಲ ಅಹ್ಮದಬಾದ್‌ನಲ್ಲಿ ರಾಷ್ಟ್ರ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ನಡೆಯಲಿವೆ ಎಂದರು. ಪರಿ ಷತ್ ಜಿಲ್ಲಾಧ್ಯಕ್ಷ ಎಂ.ಡಿ.ಲತೀಫ್‌ಸಾಬ್,ಚಳ್ಳಕೆರೆ ಯರಿಸ್ವಾಮಿ,ಎಚ್.ಶ್ರೀನಿವಾಸ್, ಇ.ರುದ್ರಮುನಿ,ಎಂ.ಮನೋಹರ್, ಕೆ.ವಿ.ನಾಗಲಿಂಗರೆಡ್ಡಿ,ಎಚ್.ಮಂಜುನಾಥ್ ಇತರರು ಇದ್ದರು.
ರಾಜ್ಯಮಟ್ಟದ ಸಮಾವೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ನಗರ ಹಿರಿಯ ವಿಭಾಗ-ಚಿತ್ರದುರ್ಗ ವಿದ್ಯಾವಿಕಾಸ ಸಂಸ್ಥೆಯ ಪಿ.ಆರ್.ಬಸವಪ್ರಭು,ಉಕ್ತ ನಂದಿತಾ. ಟಿ.ಎಸ್.ಸುಶ್ರುತಾ,ಪಿ.ಆದಿ ತ್ಯ. ಚಳ್ಳಕೆರೆ ಮಹಾತ್ಮ ಗಾಂಧಿ ಪ್ರೌಢಶಾಲೆ ಶ್ರೀವೈಷ್ಣವಿ,ಧನುಶ್ರೀ,ನಗರ ಕಿರಿಯರ ವಿಭಾಗ-ಚಳ್ಳಕೆರೆ ಎಸ್‌ಆರ್‌ಎಸ್ ಶಾಲೆ ದಿಯಾ.ಎಂ. ಗಂಧವಿಡಿ,ಟಿ.ವಿ.ವಿಭಾ.ಧವನ್.ಎಸ್.ರೆಡ್ಡಿ,ಮಹಮದ್.
ಗ್ರಾಮೀಣ ಹಿರಿಯರ ವಿಭಾಗ: ಪಾಲವ್ವನಹಳ್ಳಿ ಸರ್ಕಾರಿಪ್ರೌಢಶಾಲೆ ಜಿ.ಆರ್.ರಮ್ಯಾ,ಜಿ.ವಿ.ರಶ್ಮಿ.ಚೌಲಿಹಳ್ಳಿಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆ ಜಿ.ವಿ.ಐಶ್ವರ್ಯ,ಎ.ಪವಿತ್ರಾ.ಸಿರಿಗೆರೆ ಬಿಎಲ್‌ಆರ್ ಪ್ರೌಢಶಾಲೆಯ ಕೆ.ಎನ್.ಪುನೀತ್‌ಕುಮಾರ್,ಎಂ.ಎಚ್.ಶಿವಕುಮಾರ್. ಗ್ರಾಮೀಣ ಕಿರಿಯರ ವಿಭಾಗ:ಭರಮಸಾಗರ ಡಿವಿಎಸ್ ಪ್ರೌಢಶಾಲೆಯ ಕೆ.ಎನ್.ಸೃಷ್ಟಿ,ಕೆ.ಮಾನಸ. ಬಾಲೇನಹಳ್ಳಿ ಇಂದಿರಾ ವಸತಿ ಶಾ ಲೆಯ ಪಿ.ಮಧು ಹಾಗೂ ಆರ್.ಹೇಮಂತ್.
—-