ರ್ದಜಿಗಳ ಕೆಲಸಕ್ಕೆ ಬಿತ್ತು ಟೆಂಡರ್ ಕತ್ತರಿ

ಪಂಚನಹಳ್ಳಿ: ಅರ್ಧ ಶೈಕ್ಷಣಿಕ ವರ್ಷ ಮುಗಿದು ಮಧ್ಯಂತರ ರಜೆ ಸಮೀಪಿಸಿದರೂ ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಣೆಯಾಗಿಲ್ಲ. ಸಮವಸ್ತ್ರ ವಿತರಣೆಗೆ ಇದೇ ಮೊದಲ ಬಾರಿಗೆ ಟೆಂಡರ್ ಕರೆಯುವ ಚಿಂತನೆಯೇ ವಿತರಣೆ ಪಕ್ರಿಯೆ ತಡವಾಗಲು ಕಾರಣ. ಈ ಚಿಂತನೆ ಸ್ಥಳೀಯ ರ್ದಜಿಗಳ ಕೆಲಸಕ್ಕೂ ಕುತ್ತು ತಂದಿದೆ.

ನಾಲ್ಕೈದು ವರ್ಷಗಳಿಂದ ಸರ್ಕಾರ ಎರಡನೇ ಜೊತೆ ಸಮವಸ್ತ್ರವನ್ನು ಸ್ಥಳೀಯವಾಗಿ ಖರೀದಿಸಿ ವಿತರಿಸುವಂತೆ ಎಸ್​ಡಿಎಂಸಿಗೆ ಸೂಚಿಸುತ್ತಿತ್ತು. ಈ ಸಂಬಂಧ ಎಸ್​ಡಿಎಂಸಿ ಖಾತೆಗೆ ಅನುದಾನ ಬಿಡುಗಡೆ ಮಾಡುತ್ತಿತ್ತು. 2018-19ನೇ ಸಾಲಿನಲ್ಲಿ ಮೊದಲ ಬಾರಿಗೆ ಕೇಂದ್ರೀಕೃತ ಟೆಂಡರ್ ಮೂಲಕ ಸಮವಸ್ತ್ರ ಖರೀದಿಸಲು ಸರ್ಕಾರ ಮುಂದಾಗಿದೆ. ಇದು ಸ್ಥಳೀಯ ರ್ದಜಿಗಳಲ್ಲಿ ಅಸಮಾಧಾನ ಉಂಟುಮಾಡಿದೆ.

ಹಣ ಉಳಿಸುವ ಸಲುವಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುದು ಎಂಬುದು ಸರ್ಕಾರದ ಸಮರ್ಥನೆ. ಆದರೆ ಎಸ್​ಡಿಎಂಸಿ ಮೂಲಕ ಸಮವಸ್ತ್ರ ಖರೀದಿಸಿದರೆ ಸ್ಥಳೀಯ ರ್ದಜಿಗಳು ಮತ್ತು ಕಾರ್ವಿುಕರಿಗೆ ಕೆಲಸ ಸಿಕ್ಕಂತಾಗುತ್ತದೆ. ಜತೆಗೆ ಮಕ್ಕಳ ಅಳತೆಗೆ ಅನುಗುಣವಾದ ಉತ್ತಮ ಗುಣಮಟ್ಟದ ಬಟ್ಟೆ ಕೂಡ ದೊರೆಯುತ್ತದೆ ಎಂಬುದು ಪೋಷಕರ ನಂಬಿಕೆ.

ಪ್ರತಿ ವರ್ಷದಂತೆ ಈ ಬಾರಿ ಕೂಡ ಸರ್ಕಾರ ಸಮವಸ್ತ್ರ ಖರೀದಿಯನ್ನು ಎಸ್​ಡಿಎಂಸಿಗೆ ನೀಡುತ್ತದೆ. ಶಾಲೆಯವರು ನಮ್ಮ ಬಳಿಯೆ ಸಮವಸ್ತ್ರ ಖರೀದಿ ಮಾಡುತ್ತಾರೆ ಎಂದು ಭಾವಿಸಿದ ರಾಜ್ಯದ ಸಾವಿರಾರು ರ್ದಜಿಗಳು ಈಗಾಗಲೆ ಸಾಲ ಮಾಡಿ ಹಣ ತೆತ್ತು ಬಟ್ಟೆ ಖರೀದಿಸಿದ್ದಾರೆ. ಸ್ಥಳೀಯ ಕಾರ್ವಿುಕರನ್ನು ಬಳಸಿಕೊಂಡು ಸಮವಸ್ತ್ರಗಳನ್ನು ಸಿದ್ಧಪಡಿಸಿ ತಮ್ಮ ಬಳಿಯಿಟ್ಟುಕೊಂಡಿದ್ದಾರೆ. ಆದರೆ ಸರ್ಕಾರ ಸಮವಸ್ತ್ರ ಖರೀದಿ ಬಗ್ಗೆ ಇಲ್ಲಿಯವರೆಗೆ ಸ್ಪಷ್ಟ ನಿರ್ಧಾರ ಪ್ರಕಟಿಸದೆ ಇರುವುದು ರ್ದಜಿಗಳಲ್ಲಿ ಆತಂಕ ಮೂಡಿಸಿದೆ.

ರೈತರ ಸಾಲ ವಸೂಲಾತಿಗೆ ನೋಟಿಸ್ ನೀಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳುವ ಸರ್ಕಾರ ತನ್ನ ತಪ್ಪು ನಿರ್ಧಾರದಿಂದ ರಾಜ್ಯದ ಸಾವಿರಾರು ರ್ದಜಿಗಳನ್ನು ಸಾಲದ ಸುಳಿಗೆ ತಳ್ಳಲಿದೆ ಎಂಬುದು ರ್ದಜಿಗಳ ಅಳಲು.

ಕೇವಲ 32 ಕೋಟಿ ರೂ.: ರಾಜ್ಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸಲು ಬೇಕಾಗಿರುವುದು 32 ಕೋಟಿ ರೂಪಾಯಿ ಮಾತ್ರ. ಈ ಹಿಂದಿನಂತೆ ಇಷ್ಟು ಹಣ ಬಿಡುಗಡೆ ಮಾಡಿದರೆ ಸ್ಥಳೀಯ ರ್ದಜಿಗಳಿಗೆ ಈ ಬಾರಿ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಹಣ ಉಳಿಸಲು ಟೆಂಡರ್ ಕರೆಯುತ್ತೇವೆ ಎಂದು ಪ್ರಕಟಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ಟೆಂಡರ್ ಕರೆಯಲು ಸರ್ಕಾರ ಚಿಂತಿಸುವುದರಲ್ಲಿ ಅಧಿಕಾರಿಗಳ ವೈಯಕ್ತಿಕ ಹಿತಾಸಕ್ತಿ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಟೆಂಡರ್​ದಾರರೊಂದಿಗೆ ಶಾಮೀಲಾಗಿ ಹಣ ಗಳಿಸಲು ಅಧಿಕಾರಿಗಳು ಲಾಬಿ ನಡೆಸಿದ್ದಾರೆ ಎಂಬುದು ರ್ದಜಿಗಳ ಪ್ರಬಲ ಆರೋಪ.

ಸಿಎಂ ಮಾತು ಕೊಟ್ಟು ಮರೆತರೇ?: ಎರಡನೇ ಜೊತೆ ಸಮವಸ್ತ್ರ ವಿತರಣೆಗೆ ಟೆಂಡರ್ ಕರೆಯುವ ಚಿಂತನೆ ನಡೆದಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರಾಜ್ಯಾದ್ಯಂತ ಶಾಲಾ ಸಮವಸ್ತ್ರ ಹೊಲಿದುಕೊಡುವ ರ್ದಜಿಗಳು ಅಸಮಾಧಾನಗೊಂಡರು. ಇದು ಮುಖ್ಯಮಂತ್ರಿ ಅವರಿಗೂ ತಿಳಿದಾಗ ಸೆ.17ರಂದು ಕಲಬುರಗಿಯಲ್ಲಿ ರ್ದಜಿಗಳ ಹಿತಾಸಕ್ತಿ ಕಾಪಾಡುವುದಾಗಿ ಭರವಸೆ ನೀಡಿದರು. ಕೇವಲ 32 ಕೋಟಿ ರೂಪಾಯಿಗೋಸ್ಕರ ಟೆಂಡರ್ ಕರೆಯುವುದು ಸಮಂಜಸವಲ್ಲ. ಅಧಿಕಾರಿಗಳೊಂದಿಗೆ ರ್ಚಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಇನ್ನೂ ಯಾವ ನಿರ್ಧಾರ ಕೈಗೊಂಡಿಲ್ಲ.