ವಿಜಯವಾಣಿ ಸುದ್ದಿಜಾಲ ಕಾರ್ಕಳ
ವಿದ್ಯಾರ್ಥಿ, ಶಿಕ್ಷಕರ ಜತೆಯಲ್ಲಿ ಹಳೇ ವಿದ್ಯಾರ್ಥಿಗಳು, ಪಾಲಕರ ಮಾರ್ಗದರ್ಶನ, ಪ್ರೋತ್ಸಾಹ ದೊರೆತರೆ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾಗುತ್ತವೆ ಎಂದು ವೈದ್ಯೆ ಡಾ.ಅಕ್ಷತಾ ರೈ ಹೇಳಿದರು.
ಬೋಳ ಪಿಲಿಯೂರು ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹಳೇ ವಿದ್ಯಾರ್ಥಿ ಸಂಘ ಹಾಗೂ ಮಿತ್ರವೃಂದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾನಿಗಳನ್ನು, ಐವರು ಗೌರವ ಶಿಕ್ಷಕಿಯನ್ನು ಅಭಿನಂದಿಸಲಾಯಿತು. ಶಿಕ್ಷಣ ಹಾಗೂ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಶ್ಯಾಮ್ ಸುಂದರ್ ಎಂ., ಬೋಳ ಗ್ರಾಪಂ ಅಧ್ಯಕ್ಷ ಬಿ.ದಿನೇಶ್ ಪೂಜಾರಿ, ಬೋಳ ವಿಠಲ ಶೆಟ್ಟಿ ಫೌಂಡೇಶನ್‌ನ ಸುನೀಲ್ ಶೆಟ್ಟಿ, ಗ್ರಾಮ ಕರಣಿಕ ಸುದರ್ಶನ್ ಕಾಮತ್, ಪ್ರಮುಖರಾದ ಸುಧೀರ್ ದೇವಾಡಿಗ, ಸುಕುಮಾರ್ ಶೆಟ್ಟಿ, ಬಿ.ಪ್ರಕಾಶ್, ಹೂವಪ್ಪ, ಬೋಳ ದಾಮೋದರ ಕಾಮತ್, ಸದಾಶಿವ ಶೆಟ್ಟಿ, ಪ್ರದೀಪ್ ಶೆಟ್ಟಿ, ಬಿ.ಕೃಷ್ಣಮೂರ್ತಿ, ಸುಜಾತಾ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು.
ಪುಂಡಲೀಕ ಎಸ್.ಪವಾರ್ ಸ್ವಾಗತಿಸಿದರು. ಗೀತಾ ವರದಿ ಮಂಡಿಸಿದರು. ಶಶಿಕಲಾ ಬಹುಮಾನಿತರ ಪಟ್ಟಿ ವಾಚಿಸಿದರು. ಜ್ಯೋತಿ ವಂದಿಸಿದರು. ಸತೀಶ್ ಶೆಟ್ಟಿ ಅಗ್ಗೊೃಟ್ಟು ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ, ಶಶಿಕಲಾ ಸಪಳಿಗ ಸಹಕರಿಸಿದರು.