ಸಿನಿಮಾ

ಶಿಕ್ಷಕನ ಮುಖಕ್ಕೆ ​​ಪೆಪ್ಪರ್ ಸ್ಪ್ರೇ ಮಾಡಿದ ವಿದ್ಯಾರ್ಥಿನಿ; ಮುಂದೇನಾಯ್ತು?..ವಿಡಿಯೋ ನೋಡಿ

ಅಮೆರಿಕ: ಶಿಕ್ಷಕರನ್ನು ದೇವರಂತೆ ನೋಡುವ ವಿದ್ಯಾರ್ಥಿಗಳಿದ್ದಾರೆ. ಆದರೆ ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯ ಕೈಯಿಂದ ಮೊಬೈಲ್​ ಕಿತ್ತುಕೊಂಡ ಶಿಕ್ಷಕ ಮೇಲೆಯೇ ಆಕೆ ಪೆಪ್ಪರ್ ಸ್ಪೇ ಮಾಡಿದ್ದಾರೆ.

ಶುಕ್ರವಾರ ನಡೆದ ಈ ಘಟನೆಯನ್ನು ಮತ್ತೊಬ್ಬ ವಿದ್ಯಾರ್ಥಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆ ಬಳಿಯ ಆಂಟಿಯೋಕ್ ಪ್ರೌಢಶಾಲೆಯಲ್ಲಿ ಈ ದುರಂತ ಘಟನೆ ನಡೆದಿದೆ ಎಂದು ಬರೆದು ಈ ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಇದನ್ನೂ ಓದಿ: ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು ಗೊತ್ತಾ..?

ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯೊಬ್ಬಳು ಶಿಕ್ಷಕರ ಕೈಗೆ ಸಿಕ್ಕಿಬಿದ್ದಳು. ಈ ವೇಳೆ ಶಿಕ್ಷಕರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದಾನೆ. ಕೋಪಗೊಂಡ ವಿದ್ಯಾರ್ಥಿನಿ ಗುರು ಎಂಬುವುದನ್ನು ನೋಡದೇ ಟೀಚರ್ ಮುಖಕ್ಕೆ ಖಾರದ ಪುಡಿ ಸ್ಪ್ರೇ ಮಾಡಿದ್ದು, ಇದರಿಂದ ಶಿಕ್ಷಕ ಕಣ್ಣು ಮುಖ ಉರಿ ತಡೆಯಲಾಗದೇ ತರಗತಿಯಿಂದ ಹೊರಗೆ ಹೋಗಿದ್ದಾರೆ.

ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಶಿಕ್ಷಕರಿಗೇ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು, ದೂರಾದೃಷ್ಟವೇ ಸರಿ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿ ಬೇಸರ ಹೊರ ಹಾಕಿದ್ದಾರೆ.

ಈ ಚಿತ್ರ ನೋಡಿದಾಗ ನಿಮಗೆ ಮೊದಲು ಕಂಡಿದ್ದೇನು?; ಈ ಫೋಟೋ ನೋಡಿ ನಿಮ್ಮ ವ್ಯಕ್ತಿತ್ವ ತಿಳಿಯಿರಿ..

Latest Posts

ಲೈಫ್‌ಸ್ಟೈಲ್