More

    ಭದ್ರತೆ ಭಾಗ್ಯವಿಲ್ಲದ ವಸತಿ ಶಾಲೆ

    ಕುಂದಾಣ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅವ್ಯವಸ್ಥೆ ಆಗರ

    ಕುಂದಾಣ: ದೇವನಹಳ್ಳಿ ತಾಲೂಕಿನ ಕುಂದಾಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಕಾಂಪೌಂಡ್, ರಸ್ತೆಗೆ ಕಾಯಕಲ್ಪವಿಲ್ಲದೆ ಸರ್ಕಾರದ ಆಸ್ತಿ, ಪಾಸ್ತಿಯ ಜತೆಗೆ ದೂರ ದೂರಿನಿಂದ ಬಂದು ದಾಖಲಾಗುವ ವಸತಿ ಶಾಲಾ ಮಕ್ಕಳಿಗೆ ಭದ್ರತೆಯ ಭಾಗ್ಯವಿಲ್ಲದಂತಾಗಿದೆ.
    ಹಾಸ್ಟೆಲ್ ಸುತ್ತಲೂ ವಿಷ ಜಂತುಗಳ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕದಲ್ಲಿ ಕಾರ್ಯ ನಿರ್ವಹಿಸುವ ಸ್ಥಿತಿ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರತಿ ಹೋಬಳಿಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಕುಂದಾಣದಲ್ಲಿ 2006-07ನೇ ಸಾಲಿನಲ್ಲಿ ಮೊರಾರ್ಜಿ ದೇಸಾಯಿತಿ ವಸತಿ ಶಾಲೆ ಪ್ರಾರಂಭಗೊಂಡಿದೆ. ಸುಮಾರು 10ಕ್ಕೂ ಹೆಚ್ಚು ಬ್ಯಾಚ್‌ಗಳು ಶೇ.100 ಕ್ಕೂ ಹೆಚ್ಚು ಲಿತಾಂಶ ಪಡೆದ ಹೆಗ್ಗಳಿಕೆ ವಸತಿ ಶಾಲೆಗಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯಮಟ್ಟದ ಕ್ರೀಡೆಗಳ ಪ್ರೋತ್ಸಾಹಕ್ಕಾಗಿ ಸುಮಾರು 16 ಎಕರೆ ಜಮೀನನ್ನು ವಸತಿ ನಿಲಯಕ್ಕೆ ಮೀಸಲಾಗಿಟ್ಟಿದೆ. ಭವ್ಯ ಕಟ್ಟಡಗಳಿದ್ದು, ಸುಸಜ್ಜಿತ ಕಾಂಪೌಂಡ್ ನಿರ್ಮಿಸುವಲ್ಲಿ ವಿಲರಾಗಿದ್ದಾರೆ. ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳ ಇಚ್ಛಾಶಕ್ತಿ ಕೊರತೆ ಕಾಂಪೌಂಡ್ ನಿರ್ಮಾಣ ನಿಳಂಬಕ್ಕೆ ಸಾಕ್ಷಿಯಾಗಿದೆ.
    ಕಾಂಪೌಂಡ್ ಇಲ್ಲದ ಕಾರಣ ವಸತಿ ಶಾಲೆಯಲ್ಲಿರುವ ತಾತ್ಕಾಲಿಕ ನೀರಿನ ತೊಟ್ಟಿಗೆ ಜಾನುವಾರುಗಳು ನುಗ್ಗುತ್ತಿವೆ. ಇದರಿಂದ ವಸತಿ ಶಾಲೆಯ ಕೈತೋಟ ನಾಶವಾಗುತ್ತಿದೆ. ಶೌಚಗೃಹದ ವ್ಯವಸ್ಥೆ ಸರಿಯಿಲ್ಲದೆ ಆಗಾಗ್ಗೆ ಬ್ಲಾಕ್ ಆಗುತ್ತಿದೆ. ಮಕ್ಕಳ ಪಾಲಕರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಜಿಲ್ಲಾಡಳಿತ ಭವನ ಅನತಿ ದೂರದಲ್ಲಿದ್ದರೂ, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಭಾಗ್ಯವಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಈಗಲಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒತ್ತ ಗಮನಹರಿಸಿ ಸಮಸ್ಯೆಗೆ ನಾಂದಿ ಹಾಡಬೇಕಿದೆ.

    ಕುಂದಾಣ ಗ್ರಾಪಂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ಇಲ್ಲಿ ರಸ್ತೆ, ಚರಂಡಿ, ವಸತಿ ಶಾಲೆಗೆ ಅಗತ್ಯ ಮೂಲ ಸೌಕರ್ಯದ ಅನಿವಾರ್ಯತೆ ಇದೆ. ಸರ್ಕಾರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಬೇಕು.
    ಮುನಿರಾಜು, ಗ್ರಾಮಸ್ಥ,

    ಶಾಲೆಗಳು ಪ್ರಾರಂಭವಾಗುವ ಮುನ್ನ ಕುಂದಾಣ ಮೊರಾರ್ಜಿ ವಸತಿ ಶಾಲೆಗೆ ರಸ್ತೆ, ಕಾಂಪೌಂಡ್ ನಿರ್ಮಾಣಕ್ಕೆ ಗಮನ ಹರಿಸಬೇಕು. ಪ್ರಸ್ತುತ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡುತ್ತಿದೆ. ಇದನ್ನೇ ನಂಬಿಕೊಳ್ಳದೆ ಸಂಬಂಧಪಟ್ಟವರು ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸೂಕ್ತ.
    ವೀಣಾರಾಣಿ ಕುಂದಾಣ, ಗ್ರಾಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts