ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಶಾಲಾ ಪ್ರಾಂಶುಪಾಲರೊಬ್ಬರನ್ನು (School Principal) ಜನನಿಬಿಡ ರಸ್ತೆಯಲ್ಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ (Moradabad) ನಡೆದಿದೆ. ಮೃತರನ್ನು ಶಬಾಬ್-ಉಲ್-ಹಸನ್ ಎಂದು ಗುರುತಿಸಲಾಗಿದ್ದು, ಹತ್ಯೆಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ (CCTV Footage) ಸೆರೆಯಾಗಿದೆ.
ಘಟನೆಯ ಕುರಿತು ಮಾತನಾಡಿರುವ ಮೊರಾದಾಬಾದ್ (Moradabad) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಣವಿಜಯ್ ಸಿಂಗ್ (Sp Ranvijay Singh), ಮೃತರನ್ನು ಶಬಾಬ್-ಉಲ್-ಹಸನ್ ಎಂದು ಗುರುತಿಸಲಾಗಿದ್ದು, ಇವರು ಮಜೋಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಲಕ್ಡಿ ಪ್ರದೇಶದಲ್ಲಿದ್ದ ಸಾಯಿ ವಿದ್ಯಾ ಮಂದಿರದ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಶಾಲೆಗೆ 50 ಮೀಟರ್ ದೂರ ಇರುವಾಗ ಈ ಘಟನೆ ನಡೆದಿದ್ದು, ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ.
Warning: Disturbing video
In UP’s Moradabad, a teacher was waylaid and shot at in the head from point blank range in the middle of a road by bike borne assailants. The disturbing incident was caught on CCTV. pic.twitter.com/UkBtB4kNbN
— Piyush Rai (@Benarasiyaa) November 5, 2024
ನಾಲ್ಕು ತಿಂಗಳ ಹಿಂದೆ ಶಾಲೆಯ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ತಮ್ಮ ಮಗುವಿನ ಸಾವಿಗೆ ಶಬಾಬ್ ನೀಡಿದ ಹಿಂಸೆಯೇ ಕಾರಣ ಎಂದು ಮೃತರ ಪೋಷಕರು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ Fir ಕೂಡ ದಾಖಲಾಗಿತ್ತು. ಈ ಕಾರಣಕ್ಕಾಗಿ ಹತ್ಯೆ ನಡೆದಿರಬಹುದೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಲು ಐದು ವಿಶೇಷ ತಂಡವನ್ನು ರಚಿಸಲಾಗಿದ್ದು, ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಮೊರಾದಾಬಾದ್ (Moradabad) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಣವಿಜಯ್ ಸಿಂಗ್ (Sp Ranvijay Singh) ತಿಳಿಸಿದ್ದಾರೆ.
आज दि0 05.11.2024 को थाना मझोला क्षेत्रांतर्गत मो0सा0 सवार दो अज्ञात लोगो द्वारा एक व्यक्ति की गोली मारकर हत्या कर देने के संबंध में उच्चाधिकारीगण द्वारा घटनास्थल का निरीक्षण कर, अभियुक्तो की गिरफ्तारी हेतु टीमो का गठन किया गया है। उक्त संबंध में #SPCITY @moradabadpolice की बाईट। pic.twitter.com/BqAhke5SF7
— MORADABAD POLICE (@moradabadpolice) November 5, 2024
Muda Scam| CBI ತನಿಖೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ; ಸಿಎಂ ಸಿದ್ದರಾಮಯ್ಯಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಪಾಕಿಸ್ತಾನದಲ್ಲಿ ತೀವ್ರ Air Pollution ಆಗಲು ಭಾರತವೇ ಕಾರಣ: ಸಚಿವರ ಹೇಳಿಕೆ Viral