More

  ನಿಡ್ತ ಸರ್ಕಾರಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

  ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಇತ್ತೀಚೆಗೆ ನಡೆಯಿತು.
  ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ನಾಯಕರನ್ನು ಆಯ್ಕೆ ಮಾಡುವ ಸಲುವಾಗಿ ಮತದಾನದಲ್ಲಿ ಪಾಲ್ಗೊಂಡರು. ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಮೂಲಕ ಮತದಾನ ಮಾಡುವಂತೆ ಮೊಬೈಲ್ ಇವಿಎಂ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು.
  ಮೊಬೈಲ್ ಇವಿಎಂ ಆಪ್‌ನಲ್ಲಿ ಅಭ್ಯರ್ಥಿಗಳ ಹೆಸರು ಅದರ ಪಕ್ಕದಲ್ಲಿ ಅಭ್ಯರ್ಥಿಯ ಚಿಹ್ನೆ, ಅದರ ಪಕ್ಕದಲ್ಲಿ ವೊಂಟಿಂಗ್ ಬಟನ್ ಅನ್ನು ಕ್ರಿಯೇಟ್ ಮಾಡಲಾಗಿತ್ತು. ವಿದ್ಯಾರ್ಥಿಗಳು ಇವಿಎಂ ಆಪ್‌ನಲ್ಲಿ ವೊಟಿಂಗ್ ಗುಂಡಿ ಒತ್ತುವ ಮೂಲಕ ಮತದಾನ ಮಾಡಿದರು. ಶಾಲಾ ನಾಯಕರ ವಿವಿಧ 8 ಸ್ಥಾನಕ್ಕೆ 16 ಮಂದಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.
  ಮುಖ್ಯ ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ ಕಾರ್ಯನಿರ್ವಹಿಸಿದರು. ಶಾಲಾ ಮತದಾನ ಮತ್ತು ಸಾಕ್ಷರತಾ ಕ್ಲಬ್‌ನ ನೋಡಲ್ ಅಧಿಕಾರಿ ಎಂ.ವಿ.ರೂಪಾ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ, ಚುನಾವಣೆಯಲ್ಲಿ ಆಯ್ಕೆಯಾದ ನಾಯಕರ ಜಾವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರಾದ ಮಾರುತಿ ಅರೇರ್, ಡಿ.ಸಿ.ಕುಶಾಲಪ್ಪ, ಮಹಾದೇವಿ, ಪ್ರಿಯಾಂಕಾ ಚಿಪಳೂಣಕರ್, ಗೀತಾ, ಡಿ.ಎಸ್.ಮಧುಕುಮಾರ್ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

  See also  ಮಸ್ಕತ್‌ನಿಂದ ಬಂದು ಮತದಾನ ಮಾಡಿದ ದಂಪತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts