More

    ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ

    ರಾಯಚೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಬುಧವಾರದಿಂದ ಆರಂಭವಾಗಿದ್ದು, ಬೇಸಿಗೆ ರಜೆ ಮುಗಿಸಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹೂ ನೀಡಿ ಸ್ವಾಗತಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದರು.

    ಶಾಲೆಗಳಿಗೆ ತಳಿರು ತೋರಣ ಕಟ್ಟಿ ಅಲಂಕರಿಸುವುದರ ಜತೆಗೆ ವಿಶೇಷ ಅಲಂಕಾರ ಮಾಡಿ ಮಕ್ಕಳು ಶಾಲೆಗೆ ಆಗಮಿಸಲು ಆಕರ್ಷಣೆ ಉಂಟಾಗುವಂತೆ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರೆ, ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಪುಷ್ಪವೃಷ್ಟಿ ಮೂಲಕ ಸ್ವಾಗತ ಕೋರಲಾಯಿತು.

    ಜಿಲ್ಲೆಯಲ್ಲಿನ 1,457 ಕಿರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, 629 ಅನುದಾನಿತ ಶಾಲೆ, 256 ಪ್ರೌಢಶಾಲೆ, 212 ಅನುದಾನಿತ ಪ್ರೌಢಶಾಲೆಗಳಿದ್ದು, ಎಲ್ಲ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳು ಸಂತಸದಿಂದ ಶಾಲೆಗೆ ಆಗಮಿಸುವಂತೆ ಮಾಡಲಾಯಿತು.

    ಬಹುತೇಕ ಶಾಲೆಗಳಲ್ಲಿ ಶಾಲೆ ಆರಂಭದ ಪ್ರಥಮ ದಿನ ಎನ್ನುವ ಕಾರಣಕ್ಕೆ ಬಿಸಿಯೂಟದ ಜತೆಗೆ ಸಿಹಿ ತಿನಿಸು ಬಡಿಸಲಾಗಿತ್ತು. ಆರಂಭದ ದಿನದಿಂದಲೇ ಎಲ್ಲ ಶಾಲೆಗಳಲ್ಲಿ ಬಿಸಿಯೂಟ ಆರಂಭಕ್ಕೆ ಸೂಚಿಸಲಾಗಿದ್ದು, ಮಕ್ಕಳ ಹಾಜರಾತಿಗೆ ತಕ್ಕಂತೆ ಬಿಸಿಯೂಟ ತಯಾರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts