ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜ.13ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲು ನಿರ್ಧರಿಸಿದೆ.
ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಭೌತಿಕ ತರಗತಿಗಳು ಬಂದ್ ಆಗಿವೆ. ವಿದ್ಯಾರ್ಥಿಗಳಿಗೆ ಪರ್ಯಾಯ ಕಲಿಕಾ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಚಂದನದಲ್ಲಿ ಪಾಠಗಳ ವಿಡಿಯೋ ಸೋಮವಾರಿಂದ ಶುಕ್ರವಾರದವರೆಗೆ ಪ್ರಸಾರ ಮಾಡಲು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ನಿರ್ಧರಿಸಿದೆ.
ಈಗಾಗಲೇ ವೇಳಾಪಟ್ಟಿಯನ್ನು ನೀಡಿದ್ದು, ಎಲ್ಲ ಶಾಲೆಗಳ ಶಿಕ್ಷಕರು ವೇಳಾಪಟ್ಟಿಯನ್ನು ತಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ತಲುಪುವಂತೆ ಸಂವಹನ ಸಾಧಿಸಿ, ನಿಗದಿತ ಸಮಯದಲ್ಲಿ ದೂರದರ್ಶನ ವೀಕ್ಷಿಸಲು ತಿಳಿಸುವಂತೆ ಇಲಾಖೆಯು ಶಿಕ್ಷಕರಿಗೆ ತಿಳಿಸಿದೆ.
ಸದ್ಯ ಜ.13 ಮತ್ತು 14ರಂದು ಪ್ರಸಾರವಾಗುವ ವೇಳಾಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಹೆಚ್ಚಿನ ಮಾಹಿತಿಗೆ http://dsert.kar.nic.in/ ನೋಡಬಹುದು.