More

    ತಳಿರು-ತೋರಣಗಳ ಸಿಂಗಾರದೊಂದಿಗೆ ಸ್ವಾಗತ

    ಸಿಂಧನೂರು: ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 31ರಿಂದ ಆರಂಭವಾಗಲಿದ್ದು, ತಳಿರು-ತೋರಣಗಳ ಸಿಂಗಾರದೊಂದಿಗೆ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

    ಮೇ 29 ರಂದು ಶಾಲೆ ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಮೇ 29 ಮತ್ತು 30 ರಂದು ಶಾಲೆ ಸ್ವಚ್ಛತೆ ಕೈಗೊಂಡು ಮೇ 31 ರಿಂದ ಆರಂಭಿಸುವಂತೆ ಮತ್ತೊಂದು ಸುತ್ತೋಲೆ ಹೊರಡಿಸಿದ್ದರಿಂದ ಬುಧವಾರದಿಂದ ಅಧಿಕೃತವಾಗಿ ಶಾಲೆ ಆರಂಭೋತ್ಸವ ನಡೆಯಲಿದೆ. ಶಾಲೆ ಆರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮಕ್ಕಳಿಗೆ ಸಿಹಿ ಹಂಚಿ ಆದರದಿಂದ ಬರ ಮಾಡಿಕೊಳ್ಳಲು ಶಿಕ್ಷಕರು ಸಿದ್ಧರಾಗಿದ್ದಾರೆ.

    ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ ಮುನ್ನವೇ ಶೇ.98 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ. ತಾಲೂಕಿನಲ್ಲಿ ಸರ್ಕಾರಿ ಸೇರಿ 332 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಇವೆ. ಈ ಶಾಲೆಗಳಲ್ಲಿ ಒಟ್ಟು 3,95,443 ಪುಸ್ತಕದ ಬೇಡಿಕೆಯಿದ್ದು, ಇದುವರೆಗೆ ಸರ್ಕಾರದಿಂದ 3,91,978 ಪುಸ್ತಕಗಳು ಬಂದಿವೆ. 3,89,900 ಸರಬರಾಜು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts