ಕವಿತಾಳ: ಮಹೆಬೂಬ್ ನಗರ ಕ್ಯಾಂಪ್, ಮಲ್ಕಾಪುರ, ಚಿಕ್ಕದಿನ್ನಿ, ಹಿರೇದಿನ್ನಿ, 74 ಕ್ಯಾಂಪ್ ವಿದ್ಯಾರ್ಥಿಗಳು ಕವಿತಾಳ, ಮಸ್ಕಿ, ಮಾನ್ವಿಯಲ್ಲಿನ ಶಾಲೆ-ಕಾಲೇಜಿಗೆ ತೆರಳುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ ಇಲ್ಲದಿರುವುದರಿಂದ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಆಗುತ್ತಿಲ್ಲ.
ಕೆಲ ಪಾಲಕರು ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಶಾಲೆ-ಕಾಲೇಜಿಗೆ ಬಿಟ್ಟು ಬರುತ್ತಾರೆ. ಕೆಲ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್‌ನ ಹದಿಹರೆಯದ ಯುವತಿಯರ ಸಮದಾಯ ಸಂಘಟಕಿ ರಾಜಶ್ರೀ, ಮಹೆಬೂಬ್ ನಗರ ಕ್ಯಾಂಪ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಹದಿಹರೆಯದ ಯುವತಿಯರು ಶಾಲೆ-ಕಾಲೇಜಿಗೆ ಹೋಗಲು ತೊಂದರೆಯಾಗುತ್ತಿದ್ದು, ಬಸ್ ಸವಲತ್ತು ಕಲ್ಪಿಸಬೇಕು ಎಂದು ಮಸ್ಕಿ ಡಿಪೋ ವ್ಯವಸ್ಥಾಪಕ ಆದಪ್ಪಗೆ ಮನವಿ ಸಲ್ಲಿಸಲಾಗುವದು. ವಿದ್ಯಾರ್ಥಿಗಳು ಶಾಲೆ-ಕಾಲೇಜು ಬಿಡಬಾರದು ಎಂದು ಕೋರಿದರು.