More

    ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣದ ನಿಯಮ ಸರಳ

    ಗದಗ:
    ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣ ನಿಯಮಗಳನ್ನು ಪದವಿ ಪೂರ್ವ ನಿರ್ದೇಶನಾಲಯ ಸರಳೀಕರಿಸಿದೆ ಎಂದು ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾನ್ಯತೆ ನವೀಕರಿಸುವ ಕುರಿತು ಈ ಮೊದಲು ಇಲಾಖೆ ಹೊರಡಿಸಿದ ಸೂತ್ತೋಲೆ ಕಠಿಣವಾಗಿತ್ತು. ಸರಳೀಕರಿಸುವ ಬಗ್ಗೆ ಶಾಲಾ ಇಲಾಖೆಯ ಪ್ರದಾನ ಕಾರ್ಯದಶಿರ್ಗಳ ಜತೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡಲಾಗಿತ್ತು. ಭದ್ರತಾ ನಿಧಿ ಪಾವತಿಸುವ ಕರಾರನ್ನು ಕೈಬಿಡಲು ಮತ್ತು 1971 ರಿಂದ ಸಂಯೋಜನೆವಾರು ವಿದ್ಯಾಥಿರ್ಗಳ ದಾಖಲಾತಿ ವಿವರಗಳನ್ನು ಪಡೆಯದಿರಲು ಮನವಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆ ನವೀಕರಣದ ನಿಯಮಗಳನ್ನು ಸರಳೀಕರಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಎಸ್​ . ವಿ. ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts