More

    ಮಲೆನಾಡಿನ ನೆರೆ ಸಂತ್ರಸ್ತರಿಗೆ ಒಕ್ಕಲಿಗರ ಸಂಘದ ನೆರವು

    ಚಿಕ್ಕಮಗಳೂರು: ಮಕ್ಕಳಿಗೆ 28.03 ಲಕ್ಷ ರೂ. ನಷ್ಟು ವಿದ್ಯಾರ್ಥಿ ವೇತನ ನೀಡಿ ಉತ್ತೇಜಿಸಿರುವ ಜಿಲ್ಲಾ ಒಕ್ಕಲಿಗರ ಸಂಘ ಸಂಕಷ್ಟದಲ್ಲಿರುವ ಅತಿವೃಷ್ಟಿ ಸಂತ್ರಸ್ತರಿಗೆ ತಲಾ 40 ಸಾವಿರ ರೂ. ನೀಡುವ ಮೂಲಕ ವಿಶೇಷವಾಗಿ ಸ್ಪಂದಿಸಿದೆ.

    ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 76ನೇ ಜನ್ಮದಿನೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸನ್ಮಾನ ಹಾಗೂ ಅತಿವೃಷ್ಟಿ ನಿರಾಶ್ರಿತರಿಗೆ ಪುನರ್ವಸತಿ ನೆರವು ವಿತರಣೆ ಕಾರ್ಯಕ್ರಮದಲ್ಲಿ 931 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ 19 ಮಂದಿ ಅತಿವೃಷ್ಟಿ ಸಂತ್ರಸ್ತರಿಗೆ ಚೆಕ್ ರೂಪದಲ್ಲಿ ಪರಿಹಾರದ ಮೊತ್ತ ವಿತರಿಸಲಾಯಿತು.

    ಅತಿಹೆಚ್ಚು ಮಳೆ ಹಾನಿ ಸಂಭವಿಸಿದ ಮೂಡಿಗೆರೆ ತಾಲೂಕಿನ 12 ಮತ್ತು ಎನ್.ಆರ್.ಪುರ ತಾಲೂಕಿನ ಮೂವರು, ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ತಲಾ ಒಬ್ಬರು ಪರಿಹಾರದ ಮೊತ್ತವನ್ನು ಚೆಕ್ ರೂಪದಲ್ಲಿ ಪಡೆದರು. ಅತಿವೃಷ್ಟಿಯಿಂದ ಪ್ರಾಣಹಾನಿಗೆ ಒಳಗಾದ 7 ಕುಟುಂಬಗಳಿಗೆ ತಕ್ಷಣವೇ ಸ್ಥಳಕ್ಕೆ ತೆರಳಿ ಸಂಘ ತಲಾ 10 ಸಾವಿರ ರೂ.ನಂತೆ ಪರಿಹಾರ ನೀಡಿತ್ತು. ಈಗ ಕಾರ್ಯಕ್ರಮದಲ್ಲಿ ಮನೆ ಕಳೆದುಕೊಂಡ ಒಟ್ಟು 19 ಮಂದಿಗೆ ಪರಿಹಾರ ನೀಡಿದೆ.

    ಸಂಘದ ಗೌರವ ಕಾರ್ಯದರ್ಶಿ ಐ.ಎಸ್.ಉಮೇಶ್​ಚಂದ್ರ, ನಿರ್ದೇಶಕರಾದ ಜಿ.ಎಸ್.ಚಂದ್ರಪ್ಪ, ಡಿ.ಎಲ್.ವಸಂತಕುಮಾರಿ, ಮೋಹನ್​ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts