ಟಿವಿಯ ಲೈವ್ ಸಂದರ್ಶನದಲ್ಲಿದ್ದಾಗಲೇ ಮೃತಪಟ್ಟ ಸಾಮಾಜಿಕ ಕಾರ್ಯಕರ್ತೆ: ವಿಡಿಯೋ ವೈರಲ್​

ಶ್ರೀನಗರ: ಸಾಮಾಜಿಕ ಕಾರ್ಯಕರ್ತೆ, ವಿದ್ವಾಂಸೆಯೊಬ್ಬರು ಟಿ.ವಿ. ಶೋದಲ್ಲಿ ಮಾತನಾಡುತ್ತಿದ್ದಾಗಲೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

ಜಮ್ಮು-ಕಾಶ್ಮೀರದ ರಿತಾ ಜಿತೇಂದರ್​ ಎಂಬುವರು ಡೋಗ್ರಿ ವಿದ್ವಾಂಸೆ. ಇವರು ರಾಜ್ಯದ ಟಿ.ವಿ. ಚಾನಲ್​ವೊಂದರಲ್ಲಿ ಲೈವ್​ ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗಲೇ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟ 56 ಸೆಕೆಂಡ್​ಗಳ ವಿಡಿಯೋ ವೈರಲ್​ ಆಗಿದೆ.
ರಿತಾ ಅವರು ಟಿವಿ ನಿರೂಪಕರಿಂದ ತುಂಬ ದೂರವೇನೂ ಕುಳಿತಿರಲಿಲ್ಲ. ಹಾಗೇ ಮಾತನಾಡುತ್ತಿರುವಾಗಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಆ ಕಾರ್ಯಕ್ರಮ ಸ್ಥಗಿತಗೊಂಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಅದನ್ನು ಫೇಸ್​ಬುಕ್​, ಟ್ವಿಟರ್​ನಲ್ಲಿ ವೀಕ್ಷಿಸಿದವರು ಆಘಾತ, ದುಃಖವನ್ನು ವ್ಯಕ್ತಪಡಿಸಿದ್ದಾರೆ.

ರಿತಾ ಜಮ್ಮು ಮತ್ತು ಕಾಶ್ಮೀರ್ ಕಲೆ, ಸಂಸ್ಕೃತಿ, ಭಾಷಾ ಅಕಾಡೆಮಿಯ ಕಾರ್ಯದರ್ಶಿಯೂ ಆಗಿದ್ದಾರೆ ಎಂದು ಹೇಳಲಾಗಿದೆ.