ಯೌವನಕ್ಕೆ ಕಾಡುವ ಛಿದ್ರ ಮನಸ್ಕತೆ

ಬೀದರ್ : ಸ್ಕಿಜೋಫ್ರೇನಿಯಾ (ಛಿದ್ರ ಮನಸ್ಕತೆ) ಎಂಬುದು ಮನಸ್ಸಿನ ಪ್ರಮುಖ ರೋಗ. ಇದು ಯೌವನದ ದೊಡ್ಡ ಸಾಮರ್ಥ್ಯ ಹಾನಿಕಾರಕ ರೋಗ. ಇದರ ಗುಣಲಕ್ಷಣಗಳಿದ್ದವರು ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎ. ಜಬ್ಬಾರ್ ಸಲಹೆ ನೀಡಿದರು.
ವಿಶ್ವ ಸ್ಕಿಜೋಫ್ರೇನಿಯಾ ದಿನ ನಿಮಿತ್ತ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಜನಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಛಿದ್ರ ಮನಸ್ಕತೆ ಕಾಯಿಲೆ ಸಾಮಾನ್ಯವಾಗಿ 15ರಿಂದ 35ರ ವಯೋಮಾನದವರಲ್ಲಿ ಕಂಡುಬರುತ್ತದೆ. ಈ ರೋಗ ನಿಯಂತ್ರಣ ಬಹುದೊಡ್ಡ ಸವಾಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ.25 ಜನ ತಮ್ಮ ಬದುಕಿನ ಯಾವುದಾದರೂ ಘಟ್ಟದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮಾನಸಿಕ ರೋಗಗಳಿಗೆ ತುತ್ತಾಗುತ್ತಾರೆ. ಅದರಲ್ಲಿ ಶೇ.1 ಜನ ಸ್ಕಿಜೋಫ್ರೇನಿಯಾ ರೋಗಕ್ಕೆ ಒಳಗಾಗುತ್ತಾರೆ ಎಂದರು.
ರೋಗ ಪತ್ತೆಗೆ ನಿರ್ದಿಷ್ಟ ಪರೀಕ್ಷೆಗಳಿಲ್ಲ. ಈ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ಹೋಗಬೇಕಿದೆ. ರೋಗಕ್ಕೆ ಚಿಕಿತ್ಸೆ ಪಡೆಯದೆ ಅನೇಕರು ಮೂಢನಂಬಿಕೆ, ಪಾಪ ಕರ್ಮದ ಫಲ, ದೆವ್ವ, ಭೂತಗಳಿಂದ ಉಂಟಾಗಿದೆ ಎನ್ನುವುದು ಸರಿಯಲ್ಲ. ದುರ್ಬಲ ಮನಸ್ಸು, ಹೆಚ್ಚು ಓದುವುದು, ಅಧಿಕ ಮಟ್ಟದ ಮಾನಸಿಕ ಚಟುವಟಿಕೆ, ಮಾಟ ಮಂತ್ರಗಳ ಮೂಲಕ ಬರುವ ರೋಗ ಎಂದು ತಪ್ಪಾಗಿ ತಿಳಿದು ಅನೇಕರು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ರೋಗ ಲಕ್ಷಣ ಕಂಡಲ್ಲಿ ಮನೋರೋಗ ತಜ್ಞರನ್ನು ಸಂಪಕರ್ಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ರಾಜಶೇಖರ ಪಾಟೀಲ್ ಮಾತನಾಡಿದರು, ಡಾ.ಇಂದುಮತಿ ಪಾಟೀಲ್, ಡಾ.ದೀಪಾ ಖಂಡ್ರೆ, ಡಾ.ಅನಿಲ ಚಿಂತಾಮಣಿ, ಡಾ.ಕೃಷ್ಣಾರಡ್ಡಿ, ಡಾ.ರವೀಂದ್ರ ಸಿರ್ಸಿ, ಡಾ.ಶಿವಶಂಕರ, ಡಾ.ಶಿವಕುಮಾರ, ಡಾ.ಮಾರ್ಥಂಡರಾವ ಖಾಶೆಂಪುರ, ಎಂ.ಅಬ್ದುಲ್ ಸಲೀಂ, ಡಾ.ಅಭಿಜೀತ ಪಾಟೀಲ್, ಡಾ.ಪೂರ್ಣಿಮಾ ಶಳಕೆ, ವೀರಶೆಟ್ಟಿ ಚನಶೆಟ್ಟಿ, ರಮೇಶ ಇಮಾನುವೇಲ್, ಶ್ರಾವಣ ಜಾಧವ್, ಓಂಕಾರ ಮಲ್ಲಿಗೆ, ಉಮೇಶ ಬಿರಾದಾರ, ಶಿವಶಂಕರ, ಅಬ್ರಾಹಂ, ಶರಣಪ್ಪ ರಾಗಾ, ರೇಣುಕಾ ತಾಂದಳೆ ಇತರರಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ರ್ಯಾಲಿ ನಡೆಯಿತು.

Leave a Reply

Your email address will not be published. Required fields are marked *