ಹಳೆಯಂಗಡಿ: ಮಳೆಗಾಲದ ನೆರೆಹಾವಳಿ ತಡೆಯಲು ಇಲ್ಲಿನ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪಲಕರಿತೋಟ ನಂದಿನಿ ನದಿಗೆ ಸಣ್ಣ ನೀರಾವರಿ ಇಲಾಖೆ ಯೋಜನೆಯಡಿ ಸುವಾರು 6 ಕೋಟಿ ರೂ. ವೆಚ್ಚದ ನದಿ ದಂಡೆ ಸಂರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆಯಿಂದ ನಂದಿನಿ ನದಿ ತಟದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ತಡೆ ಗೋಡೆ ನಿರ್ಮಾಣವಾಗುತ್ತಿದ್ದು, ಸುಮಾರು 1.50 ಕಿಲೋ ಮೀಟರ್ ತಡೆಗೋಡೆ ನಿರ್ಮಾಣವಾಗಲಿದೆ ಎಂದರು.
ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಅಜೀಜ್, ಶಶಿಕಲಾ, ನಾಗರಾಜ್, ವಿನೋದ್ ಕುವಾರ್, ಅಶೋಕ್ ಬಂಗೇರ, ಸವಿತಾ, ಅಬ್ದುಲ್ ಖಾದರ್, ಸುಖೇಶ್ ಪಾವಂಜೆ, ಧನರಾಜ್ ಕೋಟ್ಯಾನ್, ಅಶ್ವಿನ್, ಹಳೆಯಂಗಡಿ ಪಿ.ಸಿ.ಎ. ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಉಪಾಧ್ಯಕ್ಷ ಹೇಮನಾಥ ಅಮೀನ್, ಸುಜಾತಾ ಕರಿತೋಟ, ಪ್ರಮುಖರಾದ ಜೀವನ್ ಪ್ರಕಾಶ್, ವಿನೋದ್ ಬೊಳ್ಳೂರು, ಶ್ಯಾಮ್ ಪ್ರಸಾದ್, ಮನೋಜ್ ಹಳೆಯಂಗಡಿ, ವಿಶ್ವನಾಥ್ , ಲಕ್ಷ್ಮಣ್ ಸಾಲ್ಯಾನ್ ಪುನರೂರು, ಮೋಹನ್ ಕರಿತೋಟ, ಪ್ರಕಾಶ್, ದಿನೇಶ್ ಚೇಳಾಯರು, ರಾು ದೇವಾಡಿಗ, ಯೋಗೀಶ್ ಪಾವಂಜೆ, ಲೋಹಿತ್ ತೋಕೂರು ಗುತ್ತಿಗೆದಾರ ಸುನತ್ ಹೆಗ್ಡೆ ಕುಂದಾಪುರ ಮತ್ತಿತರರಿದ್ದರು.