ಕುಶಾಲನಗರ:
ಭಾರತೀಯ ರೋಲರ್ ಸ್ಕೇಟಿಂಗ್ ಸಂಸ್ಥೆ ವತಿಯಿಂದ ಮೈಸೂರಿನಲ್ಲಿ ಈಚೆಗೆ ನಡೆದ 62ನೇ ರಾಷ್ಟಿçÃಯ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಯುರೋ ಸ್ಕೂಲ್ ಚಿಮ್ಮಿ ಹಿಲ್ಸ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಡಿವಿನ್ ಗಣಪತಿ 400 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, ಮತ್ತು ್ತ600 ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ರಾಷ್ಟç ಮಟ್ಟಕ್ಕೆ ಅಯ್ಕೆ ಆಗಿದ್ದಾರೆ.
ಮೂಲತಃ ಕೊಡಗಿನವರಾದ ಕೋಲೇರ ರೋಷನ್ ಹಾಗೂ ತಾಲಿ ಧರ್ಮಾವತಿ ದಂಪತಿ ಮಗನಾಗಿರುವ ಡಿವಿನ್ ಗಣಪತಿ ತಮ್ಮ ಪೋಷಕರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಗೆ ಬೃಂದಾವನ ಸ್ಕೇಟಿಂಗ್ ಸಂಸ್ಥೆಯ ತರಬೇತಿದಾರರಾದ ಸಿ.ಎಂ. ನಾಗೇಶ್, ಮಧು, ಚಂದ್ರು ತರಬೇತಿ ನೀಡಿದ್ದಾರೆ.