More

    ರಾಮಸೇತುವಿಗೆ ನ್ಯಾಷನಲ್ ಹೆರಿಟೇಜ್ ಮೋನ್ಯುಮೆಂಟ್ ಸ್ಥಾನಮಾನ ನೀಡಬೇಕೆಂಬ ಅರ್ಜಿ ವಿಚಾರಣೆ 3 ತಿಂಗಳ ನಂತರ ಎಂದ ಸುಪ್ರೀಂ ಕೋರ್ಟ್| ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ

    ನವದೆಹಲಿ: ಪುರಾಣ ಪ್ರಸಿದ್ಧ ರಾಮಸೇತುವನ್ನು ನ್ಯಾಷನಲ್ ಹೆರಿಟೇಜ್ ಮೋನ್ಯುಮೆಂಟ್ ಎಂದು ಪರಿಗಣಿಸಬೇಕೆಂಬ ಅರ್ಜಿಯ ವಿಚಾರಣೆಯನ್ನು ಮೂರು ತಿಂಗಳ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.

    ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಅರ್ಜಿಯನ್ನು ಸಲ್ಲಿಸಿದ್ದು, ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂಬ ಸ್ಥಾನಮಾನವನ್ನು ರಾಮಸೇತುವಿಗೆ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ಮನವಿಯನ್ನು ಮಾಡಿದ್ದಾರೆ.

    ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎಸ್.ಎ.ನಜೀರ್​, ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ತುರ್ತು ನಡೆಸಬೇಕೆಂಬ ಮಧ್ಯಂತರ ಮನವಿಯನ್ನು ಪರಿಶೀಲಿಟಿ ನೀಡಿದ ಟಿಪ್ಪಣಿಯಲ್ಲಿ, ಮೂರು ತಿಂಗಳ ನಂತರ ಮತ್ತೆ ನೆನಪಿಸಿ. ಆಗ ಇದನ್ನು ಕೈಗೆತ್ತಿಕೊಳ್ಳೋಣ ಎಂದು ಸ್ಪಷ್ಟಪಡಿಸಿದೆ.

    ರಾಮಸೇತು ಅಸ್ತಿತ್ವದಲ್ಲಿ ಇರುವ ವಿಚಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತ ಮೊದಲ ಪ್ರಕರಣದಲ್ಲಿ ತಮಗೆ ಜಯ ಲಭಿಸಿದೆ ಎಂಬುದನ್ನೂ ಸ್ವಾಮಿ ಕೋರ್ಟ್​ ಗಮನಕ್ಕೆ ತಂದರು. 2017ರಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಸಭೆ ಕರೆದು ಮಾಹಿತಿ ಪಡೆದುಕೊಂಡು ಚರ್ಚೆಯೂ ನಡೆದಿದೆ. ಆದರೆ, ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂಬುದು ಘೋಷಿಸುವುದು ಬಾಕಿ ಇದೆ ಎಂದು ಕೋರ್ಟ್​ಗೆ ಸ್ವಾಮಿ ವಿವರಿಸಿದ್ದಾರೆ.

    ಸೇತು ಸಮುದ್ರ ಯೋಜನೆ ಮೂಲಕ ಈ ರಾಮಸೇತುವಿಗೆ ಹಾನಿ ಮಾಡಲು ಹಿಂದಿನ ಯುಪಿಎ ಸರ್ಕಾರ ಮುಂದಾಗಿದ್ದಾಗ ಬಹಳ ಪ್ರತಿರೋಧ ಎದುರಾಗಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts