ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಆದಾಯ ತೆರಿಗೆ ವಿಚಾರದ ಕೇಸ್ನ ಫೈನಲ್ ಹಿಯರಿಂಗ್ ಅನ್ನು ಸೋಮವಾರ ಸುಪ್ರೀಂ ಕೋರ್ಟ್ ಮಾರ್ಚ್ 17ಕ್ಕೆ ನಿಗದಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಕೇಸಿಗೆ ಸಂಬಂಧಿಸಿ 2011-12ರ ಆದಾಯ ತೆರಿಗೆ ರೀ ಅಸೆಸೆಮೆಂಟ್ ಕುರಿತು ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಫೈನಲ್ ಹಿಯರಿಂಗ್ ದಿನಾಂಕವನ್ನು ಮಾರ್ಚ್ 17ಕ್ಕೆ ನಿಗದಿ ಮಾಡಿದೆ.
ಇನ್ಕಂ ಟ್ಯಾಕ್ಸ್ ರೀ ಅಸೆಸ್ಮೆಂಟ್ ಪ್ರಕರಣವು ಇನ್ಕಂ ಟ್ಯಾಕ್ಸ್ ಅಪ್ಪಿಲೆಟ್ ಟ್ರಿಬ್ಯೂನಲ್ನಲ್ಲಿ ಬಾಕಿ ಇರುವ ವಿಚಾರವನ್ನು ಪರಿಗಣಿಸಿಯೇ ಸುಪ್ರೀಂ ಕೋರ್ಟ್ ಅದರ ಫಲಿತಾಂಶ ಬರುವ ತನಕ ವಿಚಾರಣೆಯನ್ನು ಮುಂದೂಡಿದೆ. ಅದರ ಫಲಿತಾಂಶ ಮಾರ್ಚ್ 17ರೊಳಗೆ ಬರುವ ನಿರೀಕ್ಷೆ ಇದೆ.
ಐಟಿಎಟಿಗೆ ಸೋನಿಯಾ ಗಾಂಧಿ ಮತ್ತು ಇತರರ ಪರವಾಗಿ ಹಾಜರಾಗುತ್ತಿರುವ ಹಿರಿಯ ಅಡ್ವೋಕೇಟ್ ಪಿ.ಚಿದಂಬರಂ, ಐಟಿಎಟಿ ಈಗಾಗಲೇ ತೀರ್ಪು ನೀಡಿದೆ. ಆದರೆ, ಆರು ಇತರೆ ವಿಷಯಗಳು ಬಾಕಿ ಇವೆ. ಅವುಗಳನ್ನು ಮುಂದಿನ ಹಿಯರಿಂಗ್ ಫೆ.28ರಂದು ನಿಗದಿ ಮಾಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ. (ಏಜೆನ್ಸೀಸ್)