ಪುಲ್ವಾಮಾ ದಾಳಿ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಫೆ.14 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ದೊಡ್ಡ ಪಿತೂರಿಯಿದೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್​ ಸೋಮವಾರ ವಜಾಗೊಳಿಸಿದೆ.

ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ಹಾಗೂ ನ್ಯಾಯಮೂರ್ತಿ ಸಂಜೀವ್​ ಖನ್ನಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವೂ ವಕೀಲ ವಿನೀತ್​ ಧಂಡ ಅವರು ದಾಖಲಿಸಿದ್ದ ಪಿಐಎಲ್ ಕುರಿತು ವಿಚಾರಣೆ ನಡೆಸಿ, ಅರ್ಜಿ ವಜಾ ಗೊಳಿಸಿದ್ದಾರೆ.

ಸುಮಾರು 370 ಕೆ.ಜಿ ಆರ್​ಡಿಎಕ್ಸ್ ಅನ್ನು ಉಗ್ರರು ದಾಳಿಯಲ್ಲಿ ಬಳಸಿದ್ದಾರೆ. ಇದು ತನಿಖೆ ಮೂಲಕ ತಿಳಿಯಬೇಕಿದೆ ಎಂದು ಪಿಐಎಲ್​ ಸಲ್ಲಿಸಲಾಗಿತ್ತು. (ಏಜೆನ್ಸೀಸ್​)​​