18 C
Bengaluru
Monday, January 20, 2020

ರಾಷ್ಟ್ರ ನಿರ್ಮಾಣದಲ್ಲಿ ಎಸ್​ಬಿಆರ್ ಶಿಕ್ಷಣ ಶಕ್ತಿ

Latest News

ಪರೀಕ್ಷಾ ಪೆ ಚರ್ಚಾ 3ನೇ ಆವೃತ್ತಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಜತೆ ಸಂವಹನ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂರನೇ ಆವೃತ್ತಿ ಕಾರ್ಯಕ್ರಮ ದೆಹಲಿಯ ತಲ್ಕತೋರಾ...

ರಾಜ್ಯದ 5 ನಗರಕ್ಕೆ ವಿಮಾನ ಸೇವೆ

ಬೆಂಗಳೂರು: ದೇಶದ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನಪಡೆಯುವತ್ತ ರಾಜ್ಯ ಮುನ್ನುಗುತ್ತಿದ್ದು, ಕಲಬುರಗಿ ನಂತರ ಇದೀಗ ರಾಜ್ಯದ ಐದು ನಗರಗಳಲ್ಲಿ ಮುಂದಿನ 2...

ಮಾಸಾಂತ್ಯಕ್ಕೆ ವಿಸ್ತರಣೆ?: ವಿದೇಶದಿಂದ ವಾಪಸ್ಸಾದ ಬಳಿಕ ಮತ್ತೊಂದು ಸುತ್ತಿನ ಚರ್ಚೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕೆ ಡೋಲಾಯಮಾನ. ಈ ವಿಷಯವಾಗಿ ವರಿಷ್ಠರ ಮಟ್ಟದಲ್ಲಿ ನಡೆದ ಚರ್ಚೆಯ ಸ್ವರೂಪ ಗಮನಿಸಿದರೆ,...

ಭಾರತ ಶುಭಾರಂಭ: 19 ವಯೋಮಿತಿ ವಿಶ್ವಕಪ್ ಟೂರ್ನಿ

ಬ್ಲೂಮ್ಾಂಟೆನ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಬಲಿಷ್ಠ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ...

ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕ್ಲಿಷ್ಟತೆ ಇನ್ನೂ ಮೂಡದ ಸ್ಪಷ್ಟತೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ತೀವ್ರಗೊಂಡಿರುವ ಕಾರಣ ಒಮ್ಮತ ಮೂಡದೆ ಹೊಸ ನಾಯಕತ್ವ ಘೋಷಣೆಯಲ್ಲಿ ಗೊಂದಲ ಮುಂದುವರಿದಿದೆ. ಮುಂದಿನ...

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಷ್ಟ್ರ ನಿರ್ಮಾಣ, ಮಾದರಿ ಸಮಾಜ  ನಿರ್ಮಾಣಕ್ಕೆ ಎಸ್ಬಿಆರ್ ಶೈಕ್ಷಣಿಕ ಶಕ್ತಿಯ ಕೊಡುಗೆ ಅಪಾರವಾಗಿದೆ. ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸಿದ ಶಾಲೆ ಇದಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಶರಣಬಸವೇಶ್ವರ ವಿಶ್ವವಿದ್ಯಾಲಯ ಕ್ಯಾಂಪಸ್ನ ಎಸ್ಬಿಆರ್ ಗ್ರೌಂಡ್ನಲ್ಲಿ ಪ್ರತಿಷ್ಠಿತ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ (ಎಸ್ಬಿಆರ್) ಸುವರ್ಣ ಮಹೋತ್ಸವ ಹಾಗೂ ಅಲುಮ್ನಿ (ಹಳೆಯ ವಿದ್ಯಾರ್ಥಿಗಳ ಸಂಘದ) ಬೆಳ್ಳಿ ಹಬ್ಬ ಹಾಗೂ ಸಮ್ಮಿಲನದ ಕೊನೆಯ ದಿನ ಮಂಗಳವಾರದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರ ಶೈಕ್ಷಣಿಕ ಸಾಧನೆ ಎಲ್ಲರೂ ಮೆಚ್ಚುವಂಥದ್ದು ಕೊಂಡಾಡಿದರು.
ಈ ಭಾಗದ ಸಮಗ್ರ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಪಡೆದು ಪರಿಣಿತರಾಗಬೇಕು. ಮಾಹಿತಿ ತಂತ್ರಜ್ಞಾನ ಹಾಗೂ ಅಂತರ್ಜಾಲವನ್ನು ಒಳ್ಳೆಯದಕ್ಕೆ ಬಳಸಿಕೊಳ್ಳುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
21ನೇ ಶತಮಾನ ಭಾರತೀಯರ ಶತಮಾನ. ನಮ್ಮಲ್ಲಿರುವ ಗುಣಮಟ್ಟದ ಶಿಕ್ಷಣದಿಂದಾಗಿ ಅಮೆರಿಕದಂಥ ರಾಷ್ಟ್ರ ನಮ್ಮತ್ತ ನೋಡುತ್ತಿದೆ. ನಮ್ಮ ಪ್ರತಿಭೆಗಳೇ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಅಂತಹವರನ್ನು ರೂಪಿಸಿದ್ದು ಎಸ್ಬಿಆರ್ ಎಂಬುದು ಹೆಮ್ಮೆಯ ವಿಷಯ. ನಮ್ಮ ಉದ್ಧಾರಕ್ಕೆ ಯಾರೋ ಬರುತ್ತಾರೆ ಎಂದು ನಿರೀಕ್ಷಿಸಬೇಡಿ. ನಮ್ಮನ್ನು ನಾವೇ ಉದ್ಧರಿಸಿಕೊಳ್ಳಲು ಮುಂದಾಗಬೇಕು ಎಂದರು.
ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹಾಗೂ ಚವದಾಪುರಿ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಮಾಜಿ ಮೇಯರ್ ಶರಣಕುಮಾರ ಮೋದಿ, ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ್ ನಿಷ್ಠಿ, ಎಸ್ಬಿಆರ್ ಪ್ರಾಚಾರ್ಯರೂ ಆಗಿರುವ ಶರಣಬಸವ ವಿವಿ ಸಹ ಕುಲಪತಿ ಎನ್.ಎಸ್. ದೇವರಕಲ್, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ್, ಎಸ್ಬಿಆರ್ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಖ್ಯಾತ ನರರೋಗ ತಜ ಡಾ.ಭರತ ಕೋಣಿನ್. ಉಪಾಧ್ಯಕ್ಷರಾದ ಖ್ಯಾತ ವಾಸ್ತು ಶಿಲ್ಪಿ ಬಸವರಾಜ ಖಂಡೇರಾವ್, ಡಾ.ಅಲ್ಲಮಪ್ರಭು ದೇಶಮುಖ, ಡಾ.ಬಸವರಾಜ ಬಂಡಿ, ಪ್ರಧಾನ ಕಾರ್ಯದಶರ್ಿ ವಿನಾಯಕ ಮುಕ್ಕಾ, ಕಾರ್ಯದರ್ಶಿ ಉದಯಶಂಕರ ನವಣಿ, ಮಲ್ಲಿನಾಥ ದೇವರಮನಿ, ಖಜಾಂಚಿ ಡಾ.ಸುಧಾ ಹಾಲಕಾಯಿ, ಜಂಟಿ ಕಾರ್ಯದರ್ಶಿಗಳಾದ ದಿನೇಶ ಎ.ಪಾಟೀಲ್, ಉದಯಕೃಷ್ಣ ನಂದಗಿರಿ, ಶ್ರೀಕೃಷ್ಣ ಸತಾಳಕರ್, ಖಜಾಂಚಿ ಪ್ರಶಾಂತ ಮಾನಕರ, ಗುರು ಕಣಕಿ, ಪ್ರಮುಖರಾದ ಸಂತೋಷ ಬಿಲಗುಂದಿ, ರಾಘವೇಂದ್ರ ಮೈಲಾಪುರ, ಅಪ್ಪು ಕಣಕಿ, ಅನೂಪ್ ಬಾಪುರೆ, ಜಯಂತ ಖಣಗೆ,ಶಿವರಾಜ ನರಶೆಟ್ಟಿ, ಎ.ಎಸ್.ಪಾಟೀಲ್, ಜೆ.ಎಸ್.ಖಂಡೇರಾವ್, ನೀಲಕಂಠ ಮೂಲಗೆ, ಸಂತೋಷ ಪಾಟೀಲ್ ದಣ್ಣೂರ, ಸಿದ್ದು ಪಾಟೀಲ್ ತೆಗನೂರ, ಡಾ.ಸುಜಾತ ಬಿರಾದಾರ ಪಾಟೀಲ್, ಪ್ರೊ.ಎಸ್.ಜಿ.ಡೊಳ್ಳೆಗೌಡರು, ಕೆ.ಎಸ್. ಮಾಲಿಪಾಟೀಲ್, ಉಮೇಶ ಶೆಟ್ಟಿ, ಎಸ್.ಎಸ್. ಹಿರೇಮಠ, ಬಸವರಾಜ ಮಾಡಗಿ, ರಾಮಚಂದ್ರ ಔರಸಂಗ, ಶೇಖರ ಪಾಟೀಲ್, ಶಿವಕುಮಾರ ರೇಷ್ಮಿ, ಶೇಖರ ಸುತ್ರಾವೆ, ಸುಷ್ಮಾ, ದೀಪಾ ಜೋಷಿ ಇತರರಿದ್ದರು.
ಅಪ್ಪ ಪಬ್ಲಿಕ್ ಶಾಲೆ ಪ್ರಾಚಾರ್ಯ ಶಂಕರಗೌಡ ಹೊಸಮನಿ ನಿರೂಪಣೆ ಮಾಡಿದರು. ಶಿಕ್ಷಕ ಪ್ರಸಾದ ಜಿ.ಕೆ. ವಂದಿಸಿದರು. ಛಾಯಾ ಭರತನೂರ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರು ನೃತ್ಯ ವಚನಾಂಜಲಿ ನಡೆಸಿಕೊಟ್ಟರು.

ಶೈಕ್ಷಣಿಕ ಕ್ರಾಂತಿ ಮಾಡಿದ ಡಾ.ಶರಣಬಸವಪ್ಪ ಅಪ್ಪ: ಕಲಬುರಗಿಯಂಥ ಹಿಂದುಳಿದ ಪ್ರದೇಶವನ್ನು ಮುಂದುವರಿದ ಪ್ರದೇಶವಾಗಿಸಲು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹಾಗೂ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ನಡೆಸಿದವರು ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಗುಣಗಾನ ಮಾಡಿದರು. ಎಸ್ಬಿಆರ್ ಸುವರ್ಣ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಮತ್ತು ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ಇಲ್ಲದಿದ್ದರೆ ಈ ಭಾಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರ್ಶ ಶಿಕ್ಷಕರಾಗಿರುವ ಪ್ರಾಚಾರ್ಯ ಎನ್.ಎಸ್.ದೇವರಕಲ್ ಪ್ರತಿಮೆಯನ್ನು ಕ್ಯಾಂಪಸ್ನಲ್ಲಿ ಸ್ಥಾಪಿಸಲು ಎಲ್ಲ ಶಿಕ್ಷಕರು ಸೇರಿ ಅಪ್ಪಾಜಿ ಅನುಮತಿ ಪಡೆದು ಮುಂದಡಿ ಇಡಿ ಎಂದು ಸಲಹೆ ನೀಡಿದರು. ನಮ್ಮಲ್ಲಿ ಸತ್ತ ಮೇಲೆ ಗೌರವಿಸುವ ಸಂಸ್ಕೃತಿ ಇದೆ. ಇರುವಾಗಲೇ ಅವರು ನೋಡಿ ಖುಷಿಪಡುವಂಥ ಕೆಲಸಗಳನ್ನು ಮಾಡಬೇಕಾಗಿದೆ ಎಂದರು. ವಿಶ್ವಗುರು ಬಸವಣ್ಣನವರಿಗೆ ಇದ್ದಾಗ ಕಾಡಿ ನಂತರ ಅವರನ್ನು ಯುಗ ಪುರುಷ ಎಂದೇವು. ಗಾಂಧಿಗೆ ಗುಂಡಿಟ್ಟು ಮಹಾತ್ಮ ಎಂದೇವು. ಡಾ.ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಿ ಸತ್ತ ನಂತರ ಭಾರತ ರತ್ನ ಎಂದೇವು. ಹೀಗಾದರೆ ಹೇಗೆ? ನಮ್ಮ ಮನಸ್ಥಿತಿ ಬದಲಾಗಬೇಕು. ವ್ಯಕ್ತಿ ಇರುವಾಗಲೇ ಆತನ ಶ್ರೇಷ್ಠತೆಗಳನ್ನು ಜಗವು ಮಾತನಾಡಿಕೊಳ್ಳಬೇಕು ಎಂದು ಹಿತೋಪದೇಶ ನೀಡಿದರು.

ಲಿಂಗಾಯತ ಮಹಿಮ ಡಾ.ಅಪ್ಪ ನಡೆದಾಡುವ ವಿಶ್ವವಿದ್ಯಾಲಯ: ಲಿಂಗಾಯತ ಮಹಿಮರಾಗಿರುವ ಡಾ.ಶರಣಬಸವಪ್ಪ ಅಪ್ಪ ನಡೆದಾಡುವ ವಿಶ್ವವಿದ್ಯಾಲಯವಿದ್ದಂತೆ ಎಂದು ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು. ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಅವರಲ್ಲಿರುವ ಜ್ಞಾನ ವಿಶ್ವವಿದ್ಯಾಲಯವಿದ್ದಂತೆ. ಎಸ್ಬಿಆರ್ ಡಾಕ್ಟರ್​ಗಳನ್ನು ತಯಾರಿಸುವ ಫ್ಯಾಕ್ಟರಿ ಇದ್ದಂತೆ. ಇಲ್ಲಿ ಕಲಿತವರು ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ. ವಿಜ್ಞಾನಿಗಳು, ಇಂಜಿನಿಯರ್ಗಳಾಗಿದ್ದಾರೆ. ಇಂತಹ ಸರ್ವಶ್ರೇಷ್ಠರನ್ನು ರೂಪಿಸುವಂಥ ಸಂಸ್ಥೆ ಹುಟ್ಟು ಹಾಕಿದ್ದು ಮಾದರಿ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿ, ಫ.ಗು.ಹಳಕಟ್ಟಿ, ದೊಡ್ಡಪ್ಪ ಅಪ್ಪ, ತೋಟದಪ್ಪ ಮೊದಲಾದವರು ಹುಟ್ಟು ಹಾಕಿರುವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಇಂದು ನಾಡಿನಲ್ಲಿ ಶೈಕ್ಷಣಿಕ ಸಾಧನೆ ಮೆರೆದಿವೆ. ಶಿಕ್ಷಣದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿವೆ ಎಂದು ಹಲವು ಸಂಸ್ಥೆಗಳನ್ನು ಉಲ್ಲೇಖಿಸಿ ಶ್ಲಾಘಿಸಿದರು. ಎಸ್ಬಿಆರ್ ಈಗ ಎಕ್ಸ್ಲೆನ್ಸ್ ಆಫ್ ಏಜುಕೇಶನ್ ಆಗಿದೆ. ಅಪ್ಪ ಅವರಿಗೆ ದೇವರು ಸಿಕ್ಕಂತೆ ದೇವರಕಲ್ ಸಿಕ್ಕಿದ್ದಾರೆ. ಅದರಿಂದಾಗಿ ಎಸ್ಬಿಆರ್ ಸರ್ವಶ್ರೇಷ್ಠ ಸಂಸ್ಥೆಯಾಗಿದೆ ಎಂದು ಜಗದ್ಗುರುಗಳು ಹೇಳಿದರು.

ಈಶ್ವರ ಖಂಡ್ರೆ ಮುಂದೆ ಸಿಎಂ ಆಗ್ತಾರೆ: ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದರು. ನಾವೇನು ನಿಂಬೆಕಾಯಿ ಕೊಟ್ಟು, ತಾಯಿತ ಕಟ್ಟುವ ಸ್ವಾಮಿಗಳಲ್ಲ. ನಿಮ್ಮ ಭವಿಷ್ಯ ಉಜ್ವಲವಾಗಿದೆ. ಕಾಂಗ್ರೆಸ್ನಲ್ಲಿ ಲಿಂಗಾಯತರಿಗೆ ಬಹುದಿನಗಳ ಬಳಿಕ ಉನ್ನತ ಹುದ್ದೆ ಸಿಕ್ಕಿದೆ. ಲಿಂಗಾಯತರಿಗೆ ಕಾಂಗ್ರೆಸಿಗರು ಆದ್ಯತೆ ನೀಡಿದ್ದನ್ನು ನೋಡಿದರೆ ನೀವು ಸಿಎಂ ಆಗುತ್ತೀರಿ ಎಂದರು. ಶ್ರೀಶೈಲ ಜಗದ್ಗುರುಗಳ ಹೇಳಿಕೆಯನ್ನು ಮಾಜಿ ಮೇಯರ್ ಶರಣಕುಮಾರ ಮೋದಿ ಸ್ವಾಗತಿಸಿದರು. ಖಂಡ್ರೆ ಅವರಲ್ಲಿ ಅಂತಹ ಸಾಮಥ್ರ್ಯವಿದೆ. ಅದೇ ಕಾರಣಕ್ಕೆ ಶ್ರೀಗಳ ವಾಣಿ ಹಾಗೆ ಬಂದಿದೆ ಎಂದರು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...